ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ಗೆ ಭದ್ರಾವತಿ ಮೂಲದ 81 ವರ್ಷದ ವ್ಯಕ್ತಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಇವರು ಕೊರೊನಾದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದುವರೆಗೆ ಒಟ್ಟು 349 ಜನ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದಲ್ಲಿ ಕಳೆದ ಒಂದೂವರೆಗೆ ತಿಂಗಳಿಂದ ಕೊರೊನಾಗೆ ಯಾವುದೇ ಸಾವು ಸಂಭವಿಸಿರಲಿಲ್ಲ. ಹೊಸ ವರ್ಷದಲ್ಲಿ ಇದು ಮೊದಲನೇ ಬಲಿಯಾಗಿದೆ.
ಇಂದು 10 ಜನರಿಗೆ ಸೋಂಕು: ಶುಕ್ರವಾರ ಹೊಸದಾಗಿ 10 ಜನರಲ್ಲಿ ಸೋಂಕು ಕಂಡುಬಂದಿದೆ. ಅವರನ್ನು ಚಿಕಿತ್ಸೆಗೆ ಒಳಪಡಿಸಲಾಗಿದೆ. ಈಗಾಗಲೇ ಚಿಕಿತ್ಸೆ ಪಡೆದ 18 ಜನ ಗುಣಮುಖರಾಗಿದ್ದಾರೆ.
ತಾಲೂಕುವಾರು ವರದಿ: ಶಿವಮೊಗ್ಗ 4, ಭದ್ರಾವತಿ 1, ಶಿಕಾರಿಪುರ 0, ತೀರ್ಥಹಳ್ಳಿ 2, ಸಾಗರ 3, ಹೊಸನಗರ 0 ಪ್ರಕರಣ ದೃಢಪಟ್ಟಿದೆ. ಮೆಗ್ಗಾನ್ ಜಿಲ್ಲಾಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ 46, ಖಾಸಗಿ ಆಸ್ಪತ್ರೆಯಲ್ಲಿ 6, ಹೋಂ ಐಸೋಲೇಷನ್ನಲ್ಲಿ 48 ಸೇರಿ ಒಟ್ಟು 100 ಸಕ್ರಿಯ ಪ್ರಕರಣಗಳು ಇವೆ.