ಶಿವಮೊಗ್ಗಕ್ಕೆ ಬರಲಿದ್ದಾರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಎಲ್ಲೆಲ್ಲಿ ಭೇಟಿ

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನವೆಂಬರ್ 24ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.

24ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ರಾಜಭವನದಿಂದ ಹೊರಟು ತುಮಕೂರು ವಿಶ್ವವಿದ್ಯಾಲಯಕ್ಕೆ ತೆರಳಲಿ 10.15ಕ್ಕೆ ತಲುಪಲಿದ್ದಾರೆ. ನಂತರ, ಚಿತ್ರದುರ್ಗಕ್ಕೆ ಭೇಟಿ ನೀಡಿ ಅಲ್ಲಿಂದ ಮಧ್ಯಾಹ್ನ 12.15ಕ್ಕೆ ಹೊರಟು ಶಿವಮೊಗ್ಗ ಸಕ್ರ್ಯೂಟ್ ಹೌಸ್ ಗೆ 12.45ಕ್ಕೆ ತಲುಪಲಿದ್ದಾರೆ. 2.45ರಿಂದ 3.15ರ ವರೆಗೆ ಅಲ್ಲಿಯೇ ಸಕ್ರ್ಯೂಟ್ ಹೌಸ್ ನಲ್ಲಿ ತಂಗಲಿದ್ದಾರೆ. ಮಧ್ಯಾಹ್ನ 3.20 ಗಂಟೆಗೆ ಪಿಇಎಸ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಗೆ ಭೇಟಿ ನೀಡಲಿದ್ದಾರೆ.
follow us in link tree

ಪ್ರವಾಸಿ ತಾಣಗಳಿಂದ ಭೇಟಿ ನೀಡಲಿದ್ದಾರೆ ಥಾವರ್ ಚಂದ್
ಮಧ್ಯಾಹ್ನ 3.45ಕ್ಕೆ ಹುಲಿ ಮತ್ತು ಸಿಂಹ ಧಾಮಕ್ಕೆ ಭೇಟಿ ನೀಡುವರು. ಸಂಜೆ 6 ಗಂಟೆಗೆ ಜೋಗ ಜಲಪಾತದಲ್ಲಿರುವ ಬಾಂಬೆ ಗೆಸ್ಟ್ ಹೌಸ್ ನಲ್ಲಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.
25ರಂದು ಶಿವಮೊಗ್ಗದ ಕಾರ್ಯಕ್ರಮಗಳಲ್ಲಿ ಭಾಗಿ
ಬೆಳಗ್ಗೆ 8ಕ್ಕೆ ಜೋಗ ಜಲಪಾತಕ್ಕೆ ಭೇಟಿ ನೀಡುವರು. 8.20ಕ್ಕೆ ಜೋಗದಿಂದ ಹೊರಟು 11ಕ್ಕೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಆಗಮಿಸುವರು. ಅಲ್ಲಿ 11 ರಿಂದ ಮಧ್ಯಾಹ್ನ 12ರ ವರೆಗೆ ಆಯೋಜಿಸಿರುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 12.10 ಗಂಟೆಗೆ ಶಿವಮೊಗ್ಗದಿಂದ ಹೊರಟು ಚಿತ್ರದುರ್ಗ ಅಲ್ಲಿಂದ ತುಮಕೂರು ನಂತರ ಬೆಂಗಳೂರಿಗೆ ತೆರಳಲಿದ್ದಾರೆ.

https://www.suddikanaja.com/2021/08/30/audition-by-hombale-production-house-in-shivamogga/

error: Content is protected !!