ಚಿನ್ನಾಭರಣ ಲೂಟಿ ಮಾಡಿ ಪರಾರಿಯಾಗಿದ್ದ ವ್ಯಕ್ತಿ ಅರೆಸ್ಟ್, ಆತನ ಬಳಿ ಸಿಕ್ತು ಲಕ್ಷಾಂತರ ಮೌಲ್ಯದ ಚಿನ್ನ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ಬೆಳಲಮಕ್ಕಿ ಗ್ರಾಮದಲ್ಲಿ ಚಿನ್ನಾಭರಣ ಕಳವು ಮಾಡಿದ ಪ್ರಕರಣದ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಹೋಬಳಿಯ ಆದ್ರಿಹಳ್ಳಿ ಗ್ರಾಮದ ಸುರೇಶ್ (24) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯ ಬಳಿಯಿಂದ ₹6,98,700 ಮೌಲ್ಯದ 138.8 ಗ್ರಾಂ ಚಿನ್ನದ ಆಭರಣ, ₹ 30,000 ಮೌಲ್ಯದ ಕಳವು ಆದ ಬೈಕ್ ಸೇರಿ ಒಟ್ಟು ₹7,28,700 ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕೆಲಸಕ್ಕೆ ತೆರಳಿದ್ದಾಗ ಕಳ್ಳತನ

ಮನೆಯ ಸದಸ್ಯರೆಲ್ಲರೂ ಕೆಲಸಕ್ಕಾಗಿ ಹೊರಗಡೆ ಹೋದಾಗ ಸಮಯ ಸಾಧಿಸಿ ಮನೆಯ ಬಾಗಿಲು ಮುರಿದು ₹10 ಲಕ್ಷ ಮೌಲ್ಯದ 239 ಗ್ರಾಂ ಚಿನ್ನಾಭರಣ, ಒಂದು ಬೈಕ್ ಕಳವು ಮಾಡಲಾಗಿತ್ತು. ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 ಕೇಸ್ ದಾಖಲಾದ 25 ದಿನಗಳಲ್ಲಿ ಆರೋಪಿ ಅರೆಸ್ಟ್
ಬೆಳಲಮಕ್ಕಿ ಗ್ರಾಮದ ಬಾಪಟ್ ಕಲ್ಯಾಣ ಮಂದಿರ ಸಮೀಪದ ಕಮಲಾಕರ್ ಎಂಬುವವರ ಮನೆಯಲ್ಲಿ ನವೆಂಬರ್ 2ರಂದು ಕಳ್ಳತನ ಮಾಡಲಾಗಿತ್ತು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎಸ್.ಪಿ ಬಿ.ಎಂ.ಲಕ್ಷ್ಮೀಪ್ರಸಾದ್, ಹೆಚ್ಚುವರಿ ಎಸ್.ಪಿ ಎಚ್.ಟಿ.ಶೇಖರ್ ಮಾರ್ಗದರ್ಶನದಲ್ಲಿ ಸಾಗರ ಉಪ ವಿಭಾಗದ ಎ.ಎಸ್.ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಸಾಗರ ಪೇಟೆ ಠಾಣೆ ಪಿಐ ಕೆ.ವಿ.ಕೃಷ್ಣಪ್ಪ, ಪಿಎಸ್.ಐ ಟಿ.ಡಿ.ಸಾಗರಕರ್, ಕಾರ್ಗಲ್ ಠಾಣೆ ಪಿಎಸ್.ಐ ಜಿ.ತಿರುಮಲೇಶ್, ಸಿಬ್ಬಂದಿ ಸಂತೋಷ್ ನಾಯ್ಕ್, ಹಜರತ್ ಅಲಿ, ಶ್ರೀಧರ್, ಮೋಹನ್, ಪ್ರಕಾಶ್ ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

https://www.suddikanaja.com/2021/09/25/theft-in-house-at-gopalagowda/

error: Content is protected !!