ಶಿವಮೊಗ್ಗ ದ ಅಲೆಮಾರಿಗಳ ಕ್ಯಾಂಪಿಗೆ ಭೇಟಿ ನೀಡಿದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು

 

 

ಸುದ್ದಿ ಕಣಜ.ಕಾಂ | DISTRICT | VISHWAPRASANNA TIRTH SWAMIJI
ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿರುವ ಅಲೆಮಾರಿಗಳ ಕ್ಯಾಂಪಿಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಶನಿವಾರ ಭೇಟಿ ನೀಡಿದರು.
ಸಹೋದರಿ ನಿವೇದಿತ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳು ಪಾದಪೂಜೆ ಸ್ವೀಕರಿಸಿದ ನಂತರ ಶ್ರೀಗಳು ಮಾತನಾಡಿದರು.

ದೈವ ಕೃಪೆ, ಪ್ರಯತ್ನ ವಿಜಯದ ಗುಟ್ಟು

ಮಹಾಭಾರತದಲ್ಲಿ ಕೃಷ್ಣನ ಅನುಗ್ರಹ ಪಾರ್ಥನ ಪ್ರಯತ್ನ ಸೇರಿದಾಗ ಪಾಂಡವರಿಗೆ ವಿಜಯ ಲಭಿಸಿತ್ತು. ಅದೇ ರೀತಿ ಎಲ್ಲ ಭಾರವನ್ನು ದೇವರ ಮೇಲೆ ಹಾಕಿ ಕೈಕಟ್ಟಿಕೊಂಡು ಕುಳಿತರೆ ಪ್ರಯೋಜನವಿಲ್ಲ. ಅದರೊಂದಿಗೆ ಪ್ರಯತ್ನಶೀಲರಾಗಬೇಕು ಎಂದು ಹೇಳಿದರು.
ನಿವೇದಿತ ಪ್ರತಿಷ್ಠಾನದಿಂದ ಸ್ಥಳೀಯ ಅಲೆಮಾರಿಗಳಿಗೆ ಸಹಾಯ ಹಸ್ತ ಚಾಚಿರುವುದು ಸಂತೋಷದ ವಿಚಾರ ಎಂದು ಹೇಳಿದರು.
ವೇದಬ್ರಹ್ಮ ಅ.ಪ ರಾಮಭಟ್, ನಿವೇದಿತಾ ಪ್ರತಿಷ್ಠಾನದ ತೇಜಸ್ವಿನಿ, ವಿದ್ಯಾರಾಘವೇಂದ್ರ, ಭಾಗೀರಥಮ್ಮ, ಮಮತಾ, ಕೃಷ್ಣವೇಣಿ, ನಮ್ರತಾ ಪ್ರಫುಲ್ಲ, ಪ್ರಭಾ ಇತರರು ಉಪಸ್ಥಿತರಿದ್ದರು.

https://www.suddikanaja.com/2021/07/21/malenadu-veerashaiva-mathadhishara-parishat-supported-bs-yadiyurappa/

error: Content is protected !!