ಸುದ್ದಿ ಕಣಜ.ಕಾಂ | KARNATAKA | GOOD NEWS
ಬೆಂಗಳೂರು: ರಾಜ್ಯ ಸರ್ಕಾರವು ನೌಕರರಿಗೆ ಶುಭ ಸುದ್ದಿ ನೀಡಿದೆ. ಬಡ್ಡಿ ರಹಿತ ಹಬ್ಬದ ಮುಂಗಡವನ್ನು ₹10,000ದಿಂದ ₹25,000 ಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ರಾಜ್ಯ ಸಿವಿಲ್ ಸೇವಾ ವೃಂದದಲ್ಲಿ ಕಾಯಂ ಆಗಿ ಸೇರ್ಪಡೆಯಾಗಿರುವ ಅಖಿಲ ಭಾರತ ಸೇವೆಯ ಅಧಿಕಾರಿಗಳು ಸೇರಿದಂತೆ ಒಬ್ಬ ಕಾರ್ಯ ಸರ್ಕಾರಿ ನೌಕರನಿಗೆ ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿಗೆ ಮಾತ್ರ ಪ್ರಸ್ತುತ ಮಂಜೂರು ಮಾಡಲಾಗುತ್ತಿರುವ ಬಡ್ಡಿ ರಹಿತ ಹಬ್ಬದ ಮುಂಗಡವನ್ನು ತಕ್ಷಣದಿಂದ ಜಾರಿಗೆ ಬರುವಂತೆ ₹25,000 ಹೆಚ್ಚಿಸಿ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನೇತ್ರಪ್ರಭಾ ಎಂ.ಧಾಯಪುಲೆ ಆದೇಶದಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ವೃಂದದ ಅಧಿಕಾರಿಗಳು, ನೌಕರರು ಹಬ್ಬಗಳ ಸಂದರ್ಭದಲ್ಲಿ ಬಡ್ಡಿರಹಿತವಾಗಿ ಮುಂಗಡವನ್ನು ಪಡೆಯಬಹುದಾಗಿದ್ದು, ಮುಂಗಡವನ್ನು 10 ಸಮ ಕಂತುಗಳಲ್ಲಿ ಮರು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಬಡ್ಡಿರಹಿತ ಹಬ್ಬದ ಮುಂಗಡದ ಹೆಚ್ಚಳದಿಂದ ಡಿ ಮತ್ತು ಸಿ ದರ್ಜೆ ನೌಕರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ.
1998ರಿಂದ ಇಲ್ಲಿಯವರೆಗೆ ಹಬ್ಬದ ಮುಂಗಡ ಹೆಚ್ಚಳದ ಸಂಕ್ಷಿಪ್ತ ಮಾಹಿತಿ
1998ರ ಪೂರ್ವದಲ್ಲಿದ್ದ ಮುಂಗಡ ಮೊತ್ತ: ₹500
1998ರಲ್ಲಿ ಹೆಚ್ಚಳ: ₹500ರಿಂದ 1,000
2007ರಲ್ಲಿ ಹೆಚ್ಚಳ: ₹1,000ದಿಂದ 2,000
2012ರಲ್ಲಿ ಹೆಚ್ಚಳ: ₹2,000ದಿಂದ 5,000
2018ರಲ್ಲಿ ಹೆಚ್ಚಳ: ₹5,000ದಿಂದ 10,000
2021ರ ಮಧ್ಯಂತರ ಅವಧಿಯಲ್ಲಿ ಹೆಚ್ಚಳ: ₹10,000 ದಿಂದ 25,000
https://www.suddikanaja.com/2021/02/05/shivamogga-ranebennur-railway/