ಭದ್ರಾವತಿಯಲ್ಲಿ ಓಮಿಕ್ರಾನ್ ಪಾಸಿಟಿವ್, ಜಿಲ್ಲೆಯ ಮೊದಲ ಪ್ರಕರಣ, ಜನರಲ್ಲಿ ಭೀತಿ

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಭಯದ ವಾತಾವರಣ ಶುರುವಾಗಿದೆ.‌ ಇದಕ್ಕೆ ಕಾರಣ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆಯಾಗಿರುವುದು.
ಭದ್ರಾವತಿಯಲ್ಲಿ 20 ವರ್ಷದ ವಿದ್ಯಾರ್ಥಿನಿಯೊಬ್ಬರಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ಈಕೆಯಿಂದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ಭಾನುವಾರ ಓಮಿಕ್ರಾನ್ ಸೋಂಕು ತಗುಲಿರುವುದು ಖಚಿತವಾಗಿದೆ. ಇದನ್ನು ಖುದ್ದು ಆರೋಗ್ಯ ಸಚಿವ ಡಾ.ಸುಧಾಕರ್‌ ಅವರು ಟ್ವೀಟ್ ಕೂಡ ಮಾಡಿದ್ದಾರೆ.

IMG 20211220 WA0002READ | ಐಟಿಐ ಪಾಸ್ ಆದವರಿಗೆ HAL ನಲ್ಲಿ ಉದ್ಯೋಗ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಯುವತಿಯು ಭದ್ರಾವತಿಯ ಹಾಸ್ಟೆಲ್ ವೊಂದರಲ್ಲಿ‌ ನೆಲೆಸಿದ್ದು, ಈಕೆಯ ಸಂಪರ್ಕದಲ್ಲಿ ಇರುವವರ ಮಾದರಿಯನ್ನೂ ಸಂಗ್ರಹಿಸಲಾಗಿದೆ. ಕ್ಲಸ್ಟರ್ ಮಟ್ಟದಲ್ಲಿ ಹಲವರಿಗೆ ಸೋಂಕು ತಗುಲಿರುವ ಬಗ್ಗೆ ಅನುಮಾನಗಳಿದ್ದು, ಜನರಲ್ಲಿ ಆತಂಕ ಮೂಡಿದೆ.
ರಾಜ್ಯದ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಓಮಿಕ್ರಾನ್ ಪ್ರಕರಣ ಕಂಡುಬಂದಿತ್ತು. ಆದರೆ, ಈಗ ಜಿಲ್ಲೆಯ ಭದ್ರಾವತಿಯಲ್ಲಿ ಮೊದಲ ಪ್ರಕರಣ ದೃಢಪಟ್ಟಿದೆ.

error: Content is protected !!