ನೈಟ್ ಕರ್ಫ್ಯೂ, ಪೊಲೀಸ್ ಬೀಟ್ ಶುರು, ಅಂಗಡಿಗಳ ಬಂದ್‍ಗೆ ವಾರ್ನಿಂಗ್

 

 

ಸುದ್ದಿ ಕಣಜ.ಕಾಂ | DISTRICT | NIGHT CURFEW
ಶಿವಮೊಗ್ಗ: ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರ ಮಂಗಳವಾರ ರಾತ್ರಿಯಿಂದ ನೈಟ್ ಕರ್ಫ್ಯೂಗೆ ಮುಂದಾಗಿದೆ.
ಪರಿಣಾಮ ಶಿವಮೊಗ್ಗದಲ್ಲಿ ರಾತ್ರಿ ಎಂಟೂವರೆಯಿಂದಲೇ ಪೊಲೀಸರಿಂದ ಅನೌನ್ಸ್ ಮೆಂಟ್ ಮಾಡಲಾಗುತ್ತಿದೆ. ಅಂಗಡಿಗಳನ್ನು ಬಂದ್ ಮಾಡುವಂತೆ ಪೊಲೀಸರು ಸೂಚನೆ ನೀಡುತ್ತಿದ್ದಾರೆ.

ಪೊಲೀಸ್ ಇಲಾಖೆ ರಾತ್ರಿ 9.30ರ ನಂತರ ಅಂಗಡಿಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಿದ್ದು, ಅದರಂತೆ ಈಗಾಗಲೇ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ.

ರಾತ್ರಿ 10 ಬಳಿಕ ಶಿವಮೊಗ್ಗ ನಗರ ಸ್ತಬ್ಧ
ಶಿವಮೊಗ್ಗ ನಗರದಲ್ಲಿ 14 ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸಲಿದ್ದು, ಪ್ಯಾಟ್ರೋಲಿಂಗ್ ವಾಹನಗಳು ನಗರದೆಲ್ಲೆಡೆ ಸಂಚರಿಸಲಿವೆ. ಯಾವುದೇ ಕಾರಣಕ್ಕೂ ವಾಹನ ಮತ್ತು ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಮೆಡಿಕಲ್, ಆಸ್ಪತ್ರೆಗಳ ಹೊರತುಪಡಿಸಿ ಎಲ್ಲವೂ ಬಂದ್ ಇರಲಿವೆ.

https://www.suddikanaja.com/2021/06/02/covid-third-wave-may-hit-children-preparation-made-in-shivamogga/

error: Content is protected !!