ಸುದ್ದಿ ಕಣಜ.ಕಾಂ | DISTRICT | COIRT NEWS
ಶಿವಮೊಗ್ಗ: ಶಿರಾಳಕೊಪ್ಪದಲ್ಲಿ ಜ್ಯೂಸ್ ಅಂಗಡಿ ಮಾಲೀಕನೊಬ್ಬನ ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ, ₹50,000 ದಂಡ ವಿಧಿಸಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.
ಶಿರಾಳಕೊಪ್ಪ ಪಟ್ಟಣದಲ್ಲಿ ಕುಷನ್ ಅಂಗಡಿ ಹೊಂದಿದ್ದ ಜಾವೀದ್ ಬೇಗ್ ಎಂಬಾತನಿಗೆ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧೀಶ ಮುಸ್ತಫಾ ಹುಸೇನ್ ತೀರ್ಪು ನೀಡಿದರು. ದಂಡವನ್ನು ಕಟ್ಟದಿದ್ದರೆ ಹೆಚ್ಚುವರಿಯಾಗಿ ಆರು ತಿಂಗಳು ಕಾರವಾಸ ಶಿಕ್ಷೆ ಹಾಗೂ ದಂಡದ ಮೊತ್ತದಲ್ಲಿ ₹45,000 ಗಳನ್ನು ಅವಲಂಬಿತರಿಗೆ ಪರಿಹಾರವಾಗಿ ನೀಡಲು ಆದೇಶ ನೀಡಿದ್ದಾರೆ.
READ | ಭದ್ರಾವತಿಯಲ್ಲಿ ಪೊಲೀಸರ ಕಾರ್ಯಾಚರಣೆ 26 ಜನ ಬಂಧನ
2019ರ ನವೆಂಬರ್ 6ರಂದು ಸೈಯದ್ ಜಾಫರ್ ಮುಲ್ಲಾ (26) ಎಂಬಾತನನ್ನು ಉಡುಗಣಿ ನಿವಾಸಿ ಜಾವೀದ್ ಬೇಗ್ (20) ಚಾಕುವಿನಿಂದ ಹೊಟ್ಟೆ ಎದೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ಸುರೇಶ್ ಕುಮಾರ್ ವಾದ ಮಂಡಿಸಿದ್ದರು.
READ | ಶ್ರೀಗಂಧ, ಬೀಟೆ ತುಂಡು, ಬಂದೂಕು ಸೀಜ್, ಒಬ್ಬನ ಬಂಧನ
ಪ್ರಕರಣದ ಹಿನ್ನೆಲೆ
ಸೈಯದ್ ಜಾಫರ್ ಮುಲ್ಲಾ ಶಿರಾಳಕೊಪ್ಪ ಟೌನ್ ನಲ್ಲಿ ಕಬ್ಬಿನ ಹಾಲಿನ ಜ್ಯೂಸ್ ಅಂಗಡಿ ಹಾಕಿಕೊಂಡಿದ್ದು, ಈ ಅಂಗಡಿಗೆ ಬರುವ ಗ್ರಾಹಕರು ಬೈಕ್ ಗಳನ್ನು ಜಾವಿದ್ ಬೇಗ್ ನ ಕುಷನ್ ಅಂಗಡಿಯ ಮುಂಭಾಗ ನಿಲ್ಲಿಸುತ್ತಿರುವುದರಿಂದ ಸರಿಯಾಗಿ ವ್ಯಾಪಾರವಾಗುತ್ತಿಲ್ಲ. ಅಂಗಡಿಯನ್ನು ಇಲ್ಲಿಂದ ತೆಗೆಯುವಂತೆ ಕುಷನ್ ಅಂಗಡಿ ಮಾಲೀಕ ಜಾವಿದ್ ಹಲವು ಸಲ ಜಗಳವಾಡಿದ್ದ. ಇದಕ್ಕಾಗಿ ಹಲವು ಸಲ ಗಲಾಟೆಯೂ ನಡೆದಿತ್ತು. ಇದೇ ವಿಚಾರವಾಗಿ ಮತ್ತೆ ಜಗಳ ನಡೆದಿದ್ದು ಕೊಲೆಯಲ್ಲಿ ಅಂತ್ಯವಾಗಿತ್ತು. ಶಿಕಾರಿಪುರ ಸಿಪಿಐ ಬಸವರಾಜ್ ತನಿಖೆ ನಡೆಸಿದ್ದರು. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
https://www.suddikanaja.com/2021/02/12/man-jailed-for-grew-ganja-in-hosanagara/