ಭದ್ರಾವತಿಯಲ್ಲಿ‌ ಪೊಲೀಸರ ಭರ್ಜರಿ ಬೇಟೆ, ಲಕ್ಷಾಂತರ ಮೌಲ್ಯದ ರಾಶಿ ರಾಶಿ ಮೊಬೈಲ್ ವಶ

 

 

ಸುದ್ದಿ‌ ಕಣಜ.ಕಾಂ | TALUK | CRIME NEWS
ಭದ್ರಾವತಿ: ಮಹಾರಾಷ್ಟ್ರದಿಂದ ಕದ್ದು ಭದ್ರಾವತಿಯಲ್ಲಿ ಮಾರಾಟ ಮಾಡುತಿದ್ದ ಲಕ್ಷಾಂತರ ಮೌಲ್ಯದ ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭದ್ರಾವತಿಯ ಅನ್ವರ್ ಕಾಲೋನಿ ನಿವಾಸಿ ಸಯ್ಯದ್ ಅಲ್ವಿ (25) ಬಂಧಿಸಲಾಗಿದೆ. ಈತನ ಬಳಿಯಿಂದ ₹6,68,400 ಮೌಲ್ಯದ ವಿವಿಧ ಕಂಪನಿಯ ಒಟ್ಟು 55 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ.

IMG 20211231 WA0000
ಭದ್ರಾವತಿಯಲ್ಲಿ ವಶಕ್ಕೆ ಪಡೆದಿರುವ ವಿವಿಧ ಕಂಪನಿಯ ಮೊಬೈಲ್

READ | ಕ್ಷುಲ್ಲಕ ಕಾರಣಕ್ಕೆ ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಖಚಿತ ಮಾಹಿತಿ ಮೇರೆಗೆ ನಡೀತು ದಾಳಿ
ಭದ್ರಾವತಿಯ ಸಂತೆ ಮೈದಾನದಲ್ಲಿ ಯಾರೋ ಮೂರು ಜನ ಆರೋಪಿಗಳು ಕಳ್ಳತನದಿಂದ ತಂದಿರುವ ಮೊಬೈಲ್ ಫೋನ್ ಗಳನ್ನು ಹಂಚಿಕೊಳ್ಳುತ್ತಿರುವ ಬಗ್ಗೆ ಬಂದ ಮಾಹಿತಿಯ ಮೇರೆಗೆ ಪ್ರೊಬೇಷನರಿ ಡಿವೈಎಸ್.ಪಿ ಗಜಾನನ ಸುತಾರ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಇಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದು, ಒಬ್ಬ ಸೆರೆ ಸಿಕ್ಕಿದ್ದಾನೆ. ಹೊಸಮನೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!