ಆಲ್ಕೋಳ ಗ್ರಾಮದಲ್ಲಿ ಗಾಂಜಾ ಮಾರಾಟ, ‘ಹಾವಳಿ’ ಸೇರಿ ನಾಲ್ವರು ಅರೆಸ್ಟ್, ವಿಶೇಷ ತಂಡ ಕಾರ್ಯಾಚರಣೆ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದಲ್ಲಿ ಗಾಂಜಾ ಮಾರಾಟ ಮತ್ತು ಸೇವನೆಯನ್ನು ನಿಗ್ರಹಿಸಲು ರಚಿಸಲಾಗಿರುವ ವಿಶೇಷ ತಂಡವು ಕಾರ್ಯಾಚರಣೆ ಶುಕ್ರವಾರ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ಕು ಜನರನ್ನು ಬಂಧಿಸಿದೆ.

ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡವು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದು, ಆಲ್ಕೊಳ ಗ್ರಾಮದ ಕೆರೆ ಏರಿಯ ಮೇಲೆ ದ್ವಿ ಚಕ್ರ ವಾಹನ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಬಂಧಿಸಿದೆ.

ಬಂಧಿತರಲ್ಲಿ ಇಬ್ಬರು ಚಿಕ್ಕಮಗಳೂರಿನವರು
ನಾಲ್ವರನ್ನು ಬಂಧಿಸಲಾಗಿದ್ದು, ಅದರಲ್ಲಿ ಇಬ್ಬರು ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ. ತರೀಕೆರೆಯ ಸದ್ದಾಂ (30), ಶಕೀಲ್ ಮುನಾವರ್(30) ಹಾಗೂ ಶಿವಮೊಗ್ಗದ ಎಲ್.ಬಿ.ಎಸ್.ನಗರದ ಶ್ರೀಕಾಂತ್ ಅಲಿಯಾಸ್ ರೊನಾಲ್ಡೋ (24), ವೆಂಕಟೇಶ ನಗರದ ಸಂತೋಷ್ ಅಲಿಯಾಸ್ ಹಾವಳಿ (26) ಎಂಬುವವರನ್ನು ಬಂಧಿಸಲಾಗಿದೆ.

ಬಂಧಿತರ ಬಳಿ ಸಿಕ್ತು ಗಾಂಜಾ

ಬಂಧಿತ ಆರೋಪಿಗಳ ಬಳಿ ಅಂದಾಜು 45,000 ರೂಪಾಯಿ ಮೌಲ್ಯದ ಒಟ್ಟು 1,250 ಗ್ರಾಂ. ಗಾಂಜಾ ಹಾಗೂ 1,310 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

https://www.suddikanaja.com/2020/12/23/fake-cigarettes-in-shivamogga-karnataka/

error: Content is protected !!