ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ಸಚಿವರಿಗೆ ಭೇಟಿ, ಸಿಎಂ ಜತೆ ಸರ್ಕಾರಿ ನೌಕರರ ಸಮಸ್ಯೆಯ ಸಮಾಲೋಚನೆ ಭರವಸೆ

 

 

ಸುದ್ದಿ ಕಣಜ.ಕಾಂ | KARANATAKA | PROTEST
ಶಿವಮೊಗ್ಗ: ಸರ್ಕಾರಿ ನೌಕರರ ಸಮಸ್ಯೆಗಳನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (cm basavaraj bommai) ಅವರ ಗಮನಕ್ಕೆ ತರಲಾಗುವುದು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬೇಡಿಕೆಗಳಿಗೆ ಸ್ಪಂದಿಸಲು ಪ್ರಮಾಣಿಕ ಪ್ರಯತ್ನ ಮಾಡುವ ಭರವಸೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ (rdpr minister) ಕೆ.ಎಸ್.ಈಶ್ವರಪ್ಪ (ks eshwarappa) ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ (CS Shadakshari) ಅವರ ನೇತೃತ್ವದಲ್ಲಿ ಸಾವಿರಾರು ನೌಕರರು ಸಚಿವ ಈಶ್ವರಪ್ಪ ಅವರ ನಿವಾಸಕ್ಕೆ ತೆರಳಿ ಮನವಿಯನ್ನು ಸಲ್ಲಿಸಲಾಯಿತು.

ಈ ವೇಳೆ ನೌಕರ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು (state government) ವಿವಿಧ ಇಲಾಖೆಗಳ ಮೂಲಕ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ವ್ಯವಸ್ಥಿತ ಅನುಷ್ಠಾನಕ್ಕಾಗಿ ಶ್ರಮಿಸುತ್ತಿರುವ ನೌಕರರಿಂದ ಯೋಜನೆಗಳ ಯಶಸ್ವಿ ಅನುಷ್ಠಾನ ಸಾಧ್ಯವಾಗಿದೆ. ಇದರಿಂದಾಗಿ ದೇಶದಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿರುವುದು ಹರ್ಷವೆನಿಸಿದೆ. ಅದಕ್ಕಾಗಿ ನೌಕರರೆಲ್ಲರೂ ಅಭಿನಂದನಾರ್ಹರು ಎಂದರು.

ಬಹುದಿನಗಳಿಂದ ಇತ್ಯರ್ಥಗೊಳ್ಳದೆ ಉಳಿದಿರುವ ಶಿಕ್ಷಕರ ಜ್ವಲಂತ ಸಮಸ್ಯೆಗಳ ಇತ್ಯರ್ಥಕ್ಕೆ ಗಮನಹರಿಸಲಾಗುವುದು. ನೌಕರರು ಪ್ರಕೃತಿ ವಿಕೋಪ, ಕೊರೊನಾ ಸಂದರ್ಭದಲ್ಲಿ ಒಂದು ದಿನ ವೇತನವನ್ನು ಪರಿಹಾರವಾಗಿ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

Government Employee 1
ಸಚಿವ ಈಶ್ವರಪ್ಪ ಅವರಿಗೆ ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿ ಮನವಿ ಸಲ್ಲಿಕೆ.

ಸಚಿವ ಈಶ್ವರಪ್ಪ ನೀಡಿದ ಭರವಸೆಗಳೇನು?

  1. ಕೇಂದ್ರ ಸರ್ಕಾರಿ ನೌಕರರಿಗೆ (central govt employees) ಸರಿಸಮಾನವಾದ ವೇತನ (equal salary) ಹಾಗೂ ಭತ್ಯೆಗಳನ್ನು ಜಾರಿಗೊಳಿಸುವುದು. ಎನ್.ಪಿ.ಎಸ್.ರದ್ಧತಿ (new pension scheme), ವಿವಿಧ ಇಲಾಖೆಗಳಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು (job vacancy) ಭರ್ತಿ ಮಾಡುವ ಕುರಿತಂತೆ ರಾಜ್ಯ ಸರ್ಕಾರವು ಶೀಘ್ರದಲ್ಲಿ ಸೂಕ್ತ ನಿರ್ಣಯ ಕೈಗೊಂಡು ಅನುಷ್ಠಾನಗೊಳಿಸುವುದು. ಈ ಎಲ್ಲ ವಿಚಾರಗಳನ್ನು ನೌಕರರ ಪರವಾಗಿ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳ ಮುಂದೆ ಇಡುವೆ ಎಂದು ಈಶ್ವರಪ್ಪ ಹೇಳಿದರು.
  2. ನಿವೃತ್ತ ನೌಕರರಿಗೆ ಪಿಂಚಣಿ (pension seva) ಅವರ ಮೂಲ ಅಗತ್ಯಗಳಲ್ಲೊಂದು. ಅವರ ನೆಮ್ಮದಿಯ ಬದುಕಿಗೆ ಇರುವ ಒಂದೆ ಬೆಳಕಿನ ಕಿಂಡಿ ಪಿಂಚಣಿಯಾಗಿದೆ. ನಿವೃತ್ತರಾಗುವ ಎಲ್ಲ ನೌಕರರಿಗೂ ಪಿಂಚಣಿ ದೊರೆಯಬೇಕೆಂಬುದು ನಮ್ಮ ಆಶಯವೂ ಕೂಡ ಆಗಿದೆ. ಸರ್ಕಾರಿ ನೌಕರರ ಸಮಸ್ಯೆಗೆ ಕುಟುಂಬದ ಸದಸ್ಯರಂತಿದ್ದು, ಅವರ ಸಂಕಷ್ಟಕ್ಕೆ ಸ್ಪಂದಿಸಲಾಗುವುದು.

ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದ್ದೇನು?
ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ನೌಕರರ ಬಹುದಿನಗಳ ಬೇಡಿಕೆಗಳಾದ ಕೇಂದ್ರ ಸರ್ಕಾರಿ ನೌಕರರಿಗೆ ಸಮಾನವಾದ ವೇತನ (state government vs central government salary), ಎನ್.ಪಿ.ಎಸ್.ರದ್ಧತಿ, ಖಾಲಿ ಹುದ್ದೆಗಳ ಭರ್ತಿಗೆ ಕ್ರಮ, ಶಿಕ್ಷಕರ ಸಮಸ್ಯೆಗಳ ಇತ್ಯರ್ಥ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯದಾದ್ಯಂತ ಎಲ್ಲ ಸಚಿವರನ್ನು ಭೇಟಿ ಮಾಡಲಾಗಿದೆ. ಈ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಮುಂದಿನ ಹಂತವಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಮ್ಮ ನ್ಯಾಯೋಚಿತವಾಗಿರುವ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹೇಳಿದರು.

ಕೇಂದ್ರಕ್ಕೆ ಸಮಾನವಾದ ವೇತನ ಭತ್ಯೆಗಳು ದೊರೆಯದೇ ಎಲ್ಲ ಶ್ರೇಣಿಯ ಅಧಿಕಾರಿ ಮತ್ತು ನೌಕರರಿಗೆ ಸಾಮಾನ್ಯದಿಂದ ಬಾರಿ ಪ್ರಮಾಣದಲ್ಲಿ ವ್ಯತ್ಯಾಸಗಳಿರುವುದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಇವುಗಳ ಈಡೇರಿಕೆಗೆ ನಿರ್ಣಾಯಕ ಹಂತದ ಹೋರಾಟ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಆರ್.ಮೋಹನ್‍ಕುಮಾರ್, ಕಾರ್ಯದರ್ಶಿ ಐ.ಪಿ.ಶಾಂತರಾಜ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಆರ್.ಪಾಪಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು, ಎಲ್ಲ ಇಲಾಖೆಗಳ ಅಧಿಕಾರಿ-ನೌಕರರು ಉಪಸ್ಥಿತರಿದ್ದರು.

https://www.suddikanaja.com/2021/01/04/teachers-meeting-in-shivamogga-zilla-panchayat-cs-shadakshari-requseted-to-resolve-all-problems-of-teachers/

error: Content is protected !!