ಶಿವಮೊಗ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ‌ಯಲ್ಲಿ ಮತ್ತೆ ಏರಿಕೆ

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ನಿಯಮಿತವಾಗಿ ಇಳಿಕೆ‌ ಕ್ರಮಾಂಕದಲ್ಲಿ ಸಾಗಿದ್ದ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಎರಡು ದಿನಗಳಿಂದ ಮತ್ತೆ ಏರಲಾರಂಭಿಸಿದೆ. ಗುರುವಾರ ಹೊಸದಾಗಿ 23 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

READ | ಶಿವಮೊಗ್ಗದಲ್ಲಿ ವೀಕೇಂಡ್ ಕರ್ಫ್ಯೂ ಟೂರಿಸ್ಟ್ ಪ್ಲೇಸ್‍ಗೆ ನೋ ಎಂಟ್ರಿ, ಯಾವುದಕ್ಕೆಲ್ಲ ನಿರ್ಬಂಧ, ಡಿಸಿ ಸಭೆಯ ಟಾಪ್ 5 ಪಾಯಿಂಟ್ಸ್

ತಾಲೂಕುವಾರು ಸೋಂಕಿನ ಪ್ರಮಾಣ
ಶಿವಮೊಗ್ಗದಲ್ಲಿ ಅತಿ ಹೆಚ್ಚು 15 ಸೋಂಕಿತರು ಪತ್ತೆಯಾದರೆ, ತೀರ್ಥಹಳ್ಳಿಯಲ್ಲಿ 4 ಹಾಗೂ ಸಾಗರ, ಹೊಸನಗರದಲ್ಲಿ ತಲಾ‌ ಎರಡು ಪ್ರಕರಣ ದೃಢಪಟ್ಟಿವೆ. ಪ್ರಸ್ತುತ 52 ಜನ‌ ಮನೆ ಆರೈಕೆಯಲ್ಲಿದ್ದು ಚಿಕಿತ್ಸೆ ಪಡೆಯುತಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 9, ಖಾಸಗಿ ಆಸ್ಪತ್ರೆಯಲ್ಲಿ 6 ಜನ ಚಿಕಿತ್ಸೆ ಪಡೆಯುತಿದ್ದಾರೆ. ಇಂದು 3,008 ಮಾದರಿಗಳನ್ನು ಸಂಗ್ರಹಿಸಿದ್ದು, 2,371 ನೆಗೆಟಿವ್ ಬಂದಿವೆ.

error: Content is protected !!