ಸಿಗಂದೂರು ಜಾತ್ರೆ ಕುರಿತು ಆಡಳಿತ ಮಂಡಳಿ ಮಹತ್ವದ ನಿರ್ಧಾರ

 

 

ಸುದ್ದಿ ಕಣಜ.ಕಾಂ | TALUK | SIGANDUR CHOWDESHWARI
ಸಾಗರ: ತಾಲ್ಲೂಕಿನ ಶ್ರೀ ಕ್ಷೇತ್ರ ಸಿಗಂದೂರಿ(shri kshetra sigandur chowdeshwari)ನಲ್ಲಿ ಮಕರ ಸಂಕ್ರಮಣ ಜಾತ್ರೆಗೆ ಆಡಳಿತ ಮಂಡಳಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿದ್ದು, ಶ್ರೀ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಶ್ರೀ ಕ್ಷೇತ್ರ ಸಿಗಂದೂರು ದೇವಸ್ಥಾನದಲ್ಲಿ ಜನವರಿ 14 ಮತ್ತು 15 ಎರಡು ದಿನ ನಡೆಯಬೇಕಿದ್ದ ಮಕರ ಸಂಕ್ರಮಣ ಜಾತ್ರಾ ಮಹೋತ್ಸವಕ್ಕೆ ಸಂಪೂರ್ಣ ತಯಾರಿ ನಡೆಸಿದ್ದ ಆಡಳಿತ ಮಂಡಳಿ ಕೊನೆಯ ಕ್ಷಣದಲ್ಲಿ ಸಾರ್ವಜನಿಕರಿಗೆ ನಿಬರ್ಂಧ ವಿಧಿಸಿದೆ.

ಆಡಳಿತ ಮಂಡಳಿಯವರೇನು ಹೇಳುತ್ತಾರೆ?

ಈ ಬಗ್ಗೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ರವಿಕುಮಾರ್, `ಜಾತ್ರಾ ಮಹೋತ್ಸವ ಸರಳವಾಗಿ ನಡೆಯಲಿದೆ. ಆದರೆ ಸಾರ್ವಜನಿಕರಿಗೆ ಅವಕಾಶವಿಲ್ಲ. ಜಾತ್ರೆಯ ಮೊದಲ ದಿನ 14ರ ಶುಕ್ರವಾರ ಬೆಳಗ್ಗೆ 8 ಗಂಟೆಗೆ ಮೂಲ ಸ್ಥಳವಾದ ಸೀಗೆ ಕಣಿವೆಯಿಂದ ಪ್ರಥಮ ಪೂಜೆಗೆ ಧರ್ಮಾಧಿಕಾರಿಗಳು ಹಾಗೂ ಕುಟುಂಬಸ್ಥರ ಜೊತೆಗೆ ದೇವಸ್ಥಾನದ ಸಿಬ್ಬಂದಿ ಹೊರತು ಪಡಿಸಿ ಉಳಿದವರಿಗೆ ಪ್ರವೇಶವಿಲ್ಲ. ಆ ದಿನ ಬೆಳಗ್ಗೆ 7ರಿಂದ ರಾತ್ರಿ 7ರ ವರೆಗೆ ಶ್ರೀ ದೇವಿಯ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.’
ಯಾವುದೇ ವಿಶೇಷ ಪೂಜೆ ಹಾಗೂ ಸೇವೆಗಳಿಗೆ ಭಕ್ತಾದಿಗಳಿಗೆ ಅವಕಾಶ ಇರುವುದಿಲ್ಲ. ವೇದಿಕೆ ಕಾರ್ಯಕ್ರಮಗಳನ್ನು ಸಹ ರದ್ದು ಮಾಡಿದ್ದು. 2ನೇ ದಿನ ಶನಿವಾರದ ವೀಕೆಂಡ್ ಕರ್ಫ್ಯೂ (weekend curfew) ಈಗಾಗಲೇ ಜಾರಿ ಇರುದರಿಂದ ಭಕ್ತರಿಗೆ ದರ್ಶನಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದ್ದು. ಭಕ್ತಾದಿಗಳು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ಧರ್ಮಾಧಿಕಾರಿ ಡಾ. ಎಸ್ ರಾಮಪ್ಪ ಮನವಿ ಮಾಡಿದ್ದಾರೆ.

https://www.suddikanaja.com/2021/08/05/sigandur-chowdeshari-temple-close-on-weekend/

error: Content is protected !!