ಲಾಕ್‍ಡೌನ್, ಶಾಲೆ ಬಂದ್ ಬಗ್ಗೆ ಸಚಿವ ಈಶ್ವರಪ್ಪ ಹೇಳಿದ್ದೇನು, ಶಿವಮೊಗ್ಗ ಕೋವಿಡ್ ಟಾಪ್ 4 ಪಾಯಿಂಟ್

 

 

ಸುದ್ದಿ ಕಣಜ.ಕಾಂ  | DISTRICT | HEALTH NEWS
ಶಿವಮೊಗ್ಗ: ರಾಜ್ಯದಲ್ಲಿ ಪ್ರಸ್ತುತ ಲಾಕ್ ಡೌನ್ ಹೇರುವ ಸ್ಥಿತಿ ಇಲ್ಲ. ಒಂದುವೇಳೆ, ಕೊರೊನಾ ಸೋಂಕಿನಲ್ಲಿ ಏರಿಕೆ ಕಂಡುಬಂದು, ಪರಿಸ್ಥಿತಿ ಕೈಮೀರಿದರೆ ಈ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟಾಪ್ 4 ಪಾಯಿಂಟ್ಸ್ ಇಲ್ಲಿವೆ.
  1. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು. ರಾಜ್ಯದ 6 ಸಾವಿರ ಪಂಚಾಯಿತಿಗಳಲ್ಲಿ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗುವುದು. ಟಾಸ್ಕ್ ಫೋರ್ಸ್ ನಲ್ಲಿ ಗಾಪಂ ಮತ್ತು ಇತರೆ ಸರ್ಕಾರಿ ಅಧಿಕಾರಿಗಳು ಇರಲಿದ್ದಾರೆ.
    ಏನಿದರ ಜವಾಬ್ದಾರಿ | ಗ್ರಾಮೀಣ ಮಟ್ಟದಲ್ಲಿ ಕೋವಿಡ್ ಪರಿಸ್ಥಿತಿ ಅವಲೋಕನ, ಆಸ್ಪತ್ರೆ ದಾಖಲಾತಿ, ಸೋಂಕಿತರ ಕ್ವಾರಂಟೈನ್, ಆರೋಗ್ಯಾಧಿಕಾರಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಪವರ್
  2. ಮೇಕೆದಾಟು ಪಾದಯಾತ್ರೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕಲು ಮನಸ್ಸಾಗುತ್ತಿಲ್ಲ. ಅದಕ್ಕಾಗಿ, ಎಫ್.ಐ.ಆರ್. ದಾಖಲಾದರೂ ಸುಮ್ಮನಿದ್ದೇವೆ.
  3. ಶಿವಮೊಗ್ಗದಲ್ಲಿ ಕೆಲವು ಶಾಲೆ ಮತ್ತು ಕಚೇರಿಗಳಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಶಾಲೆಗಳನ್ನು ಬಂದ್ ಮಾಡುವುದು ಅಥವಾ ಅದನ್ನು ಮುಂದುವರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಅವರೇ ಕ್ರಮಕೈಗೊಳ್ಳುವರು.
  4. 60 ಮಕ್ಕಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಈ ಕಾರಣಕ್ಕಾ ಎಲ್ಲ ಶಾಲೆಗಳನ್ನು ಬಂದ್ ಮಾಡುವುದು ಸರಿಯಲ್ಲ. ಈ ಎಲ್ಲ ವಿಚಾರಗಳ ಕುರಿತು ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಲಿದೆ.

https://www.suddikanaja.com/2022/01/06/rdpr-minister-ks-eshwarappa-opposed-weekend-in-karnataka-he-gave-many-explanation-in-it/

error: Content is protected !!