ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಅರೆಸ್ಟ್

 

 

ಸುದ್ದಿ ಕಣಜ.ಕಾಂ‌ | CITY | CRIME NEWS
ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು‌ ಆರೋಪಿಗಳನ್ನು ಗುರುವಾರ ಬಂಧಿಸಲಾಗಿದೆ. ಅವರಿಂದ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಗೆಜ್ಜೆನಹಳ್ಳಿಯ ಪುನೀತ್(20),ಬೊಮ್ಮನಕಟ್ಟೆಯ ಚೇತನ್(19), ಅಜ್ಜಂಪುರದ ವಿರೂಪಾಕ್ಷಪ್ಪ (50), ಸುರೇಶ್‌(52) ಎಂಬುವವರನ್ನು ಬಂಧಿಸಲಾಗಿದೆ.

READ | ಪುಸ್ತಕ ಎತ್ತಿಕೊಳ್ಳುವಷ್ಟರಲ್ಲಿ ದುಷ್ಕರ್ಮಿಗಳು ವಿದ್ಯಾರ್ಥಿನಿಯ ಮೊಬೈಲ್ ದೋಚಿ ಪರಾರಿ

ಆರೋಪಿಗಳಿಂದ 1340 ಗ್ರಾಂ ಒಣ ಗಾಂಜಾ ಹಾಗೂ 2,300 ರೂಪಾಯಿ ನಗದು ಹಾಗೂ ಬೈಕ್ ಅನ್ನು‌ ವಶಕ್ಕೆ ಪಡೆಯಲಾಗಿದೆ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.

error: Content is protected !!