KSRTC Bus | ಶಿವಮೊಗ್ಗದಿಂದ ಬೆಂಗಳೂರಿಗೆ ಇನ್ನೆರಡು ನಾನ್ ಏಸಿ ಬಸ್ ಆರಂಭ, ಯಾವ ಮಾರ್ಗದಲ್ಲಿ ಸಂಚಾರ, ಯಾವಾಗಿಂದ ಸೇವೆ ಲಭ್ಯ?

KSRTC BUS

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಕೆಎಸ್‍ಆರ್‍.ಟಿಸಿ ಶಿವಮೊಗ್ಗ ವಿಭಾಗ(KSRTC Shimoga division)ದ ಸಾಗರ ಘಟಕದಿಂದ ಸಾಗರ- ಸೊರಬ- ಬೆಂಗಳೂರು ಮಾರ್ಗದಲ್ಲಿ (ವಯಾ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ) ನ.5 ರಿಂದ ನೂತನವಾಗಿ ಎರಡು ನಾನ್ ಎಸಿ ಸ್ಲೀಪರ್ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.
ಈ ಸಾರಿಗೆಗಳಿಗೆ ಆನ್‍ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವೆಬ್‍ಸೈಟ್ ವಿಳಾಸ www.ksrtc.in ದ ಮೂಲಕ ಆಸನಗಳನ್ನು ಕಾಯ್ದಿರಿಸಬಹುದು. ಈ ಪ್ರಯೋಜನವನ್ನು ಪ್ರಯಾಣಿಕರು ಪಡೆದುಕೊಳ್ಳುವಂತೆ ಕೋರಲಾಗಿದೆ.

READ | ಚಿಕ್ಕಮ್ಮನ ತಾಳಿಯನ್ನೇ ಕದ್ದ ಭೂಪ, 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸ್

ಬಸ್ ವೇಳಾಪಟ್ಟಿ ಕೆಳಗಿನಂತಿದೆ
ಸಾಗರ- ಸೊರಬ- ಬೆಂಗಳೂರು ಮಾರ್ಗ: ಸಾಗರ ಹೊರಡುವ ಸಮಯ ರಾತ್ರಿ 9 ಕ್ಕೆ, ಸೊರಬ ರಾತ್ರಿ 10, ಶಿಕಾರಿಪುರ ರಾತ್ರಿ 11, ಶಿವಮೊಗ್ಗ ರಾತ್ರಿ 12, ಭದ್ರಾವತಿ ರಾತ್ರಿ 12.30 ಬೆಂಗಳೂರು ಬೆಳಿಗ್ಗೆ 6.30 ಕ್ಕೆ ತಲುಪುವುದು.
ಬೆಂಗಳೂರು- ಸೊರಬ- ಸಾಗರ ಮಾರ್ಗ: ಬೆಂಗಳೂರು ಹೊರಡುವ ಸಮಯ ರಾತ್ರಿ 9.25, ಭದ್ರಾವತಿ ರಾತ್ರಿ 1.50, ಶಿವಮೊಗ್ಗ ರಾತ್ರಿ 2.20, ಶಿಕಾರಿಪುರ ಬೆಳಗಿನ ಜಾವ 3.20, ಸೊರಬ 5.40, ಸಾಗರವನ್ನು ಬೆಳಿಗ್ಗೆ 6.40 ತಲುಪುವುದು ಎಂದು ಕೆಎಸ್‍ಆರ್‍.ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

error: Content is protected !!