ಅಡಿಕೆಯಿಂದ ರುಚಿಕರ ಉಪ್ಪಿನ ಕಾಯಿ ತಯಾರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ತಯಾರಿಕೆ ವಿಧಾನ ಹೇಗೆ, ಪ್ರಯೋಜನವೇನು?

 

 

ಸುದ್ದಿ ಕಣಜ.ಕಾಂ | KARNATAKA | ARECANUT PICKLE 
ಶಿವಮೊಗ್ಗ: ಅಡಿಕೆ ಉಪ ಉತ್ಪನ್ನಗಳಿಗೆ ಇತ್ತೀಚೆಗೆ ಒತ್ತು ನೀಡುತ್ತಿದ್ದು, ದಾವಣಗೆರೆ ಜಿಲ್ಲೆಯ ಜಿಎಂಐಟಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಅಡಿಕೆಯಿಂದ ಉಪ್ಪಿನ ಕಾಯಿ(arecanut pickle)ಯನ್ನು ತಯಾರಿಸಿದ್ದಾರೆ.
ಈ ಹಿಂದೆ ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಹೊಸನಗರ ತಾಲೂಕು ಮಳಲಿ ಮೂಲದ ನಿಖಿಲ್ ಮಳಲಿ ಅವರು ಅಡಿಕೆಯಿಂದ ಉಪ್ಪಿನಕಾಯಿಯನ್ನು ತಯಾರಿಸಿದ್ದರು. ಈಗ ನೆರೆಯ ಜಿಲ್ಲೆಯ ಜಿಎಂಟಿಐಟಿ ಕಾಲೇಜಿನ (GMTIT) ಬಯೋಟೆಕ್ನಾಲಜಿ (biotech) ಮೂರನೇ ವರ್ಷದ ವಿದ್ಯಾರ್ಥಿನಿಯರಾದ ಐಶ್ವರ್ಯ, ದೀಪ್ತಿ ಈ ಕೆಲಸ ಮಾಡಿದ್ದಾರೆ.

ಅಡಿಕೆ ಉಪ್ಪಿನ ಕಾಯಿ ತಯಾರಿಕೆ ಹೇಗೆ(how to prepare arecanut pickle)? 
  1. ಮಾವಿನ ಕಾಯಿಯಿಂದ ತಯಾರಿಸುವಾಗ ಅನುಸರಿಸುವ ವಿಧಾನಗಳನ್ನೇ ಅಡಿಕೆಯಲ್ಲೂ ಮಾಡಬೇಕು.
  2. ಸುಲಿದ ಮಧ್ಯ ಗಾತ್ರದ ಹಸಿ ಅಡಿಕೆಯನ್ನು ಸರಿಯಾಗಿ ಬೇಯಿಸಬೇಕು.
  3. 15 ದಿನ ಉಪ್ಪು ನೀರಿನಲ್ಲಿ ನೆನೆ ಇಡಬೇಕು.
  4. 15 ದಿನ ನಂತರ, ಹುಣಸೆ ಹುಳಿ, ಕೊತ್ತಂಬರಿ, ಜೀರಿಗೆ, ಶುಂಠಿ, ಮೆಣಸು, ಸಾಸಿವೆ, ಬೆಲ್ಲ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಬೇಕು. 15 ದಿನ ಇಡಬೇಕು. (ಬಿಸಿಲಿನಲ್ಲಿಟ್ಟರೆ ಬೆಸ್ಟ್)

ಯಾವುದಕ್ಕೆಷ್ಟು ಮಿಶ್ರಣ?
ಅರ್ಧ ಕೆಜಿ ಅಡಿಕೆ ಉಪ್ಪಿನ ಕಾಯಿಗೆ 250 ಗ್ರಾಂ ಹುಣಸೆ ಹಣ್ಣಿನ ರಸ, 250 ಗ್ರಾಂ ಖಾರದ ಪುಡಿ, 250 ಗ್ರಾಂ ಬೆಲ್ಲ, 150 ಗ್ರಾಂ ಅರಿಷಿಣ ಪುಡಿ, 30 ಎಂಎಲ್ ಅಡುಗೆ ಎಣ್ಣೆ ಬಳಸಬೇಕು.
ಏನು ಪ್ರಯೋಜನ?
ಅಡಿಕೆ ಉಪ್ಪಿನಕಾಯಿ ಸೇವನೆ ಮಾಡುವುದರಿಂದ ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹುದು. ಜೊತೆಗೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಗ್ಯಾಸ್ಟ್ರಿಕ್ ಗೆ ಇದು ರಾಮಬಾಣ.

https://www.suddikanaja.com/2021/03/22/trap-to-protect-mango-crops-from-fruit-flies/

error: Content is protected !!