ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಭದ್ರಾವತಿಯಲ್ಲಿ ಕಳೆದ ಎರಡ್ಮೂರು ದಿನಗಳಿಂದ ನೂರರ ಆಸುಪಾಸು ಪತ್ತೆಯಾಗುತ್ತಿದ್ದ ಸೋಂಕಿನ ಪ್ರಮಾಣ ಸೋಮವಾರ ಇಳಿಕೆಯಾಗಿದೆ.
ಭದ್ರಾವತಿ ತಾಲೂಕಿನಲ್ಲಿ 39 ಪ್ರಕರಣಗಳು ದೃಢಪಟ್ಟಿದ್ದು, ಶಿವಮೊಗ್ಗದಲ್ಲಿ 103, ತೀರ್ಥಹಳ್ಳಿಯಲ್ಲಿ 22, ಶಿಕಾರಿಪುರದಲ್ಲಿ 11, ಸಾಗರದಲ್ಲಿ 37, ಹೊಸನಗರ, ಸೊರಬದಲ್ಲಿ ತಲಾ 5, ಹಾಗೂ ಹೊರ ಜಿಲ್ಲೆಯ 8 ಪ್ರಕರಣಗಳು ಪತ್ತೆಯಾಗಿವೆ.
ಶಿಕ್ಷಣ ಸಂಸ್ಥೆಯಲ್ಲಿ 61 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 158 ಜನರು ರೋಗದಿಂದ ಗುಣಮುಖರಾಗಿದ್ದಾರೆ.