ಭದ್ರಾವತಿಯ ಶಂಕರಘಟ್ಟ ಗ್ರಾಮ ಕಂಟೈನ್ಮೆಂಟ ಜೋನ್, ಎಷ್ಟು ಜನರಿಗೆ ಸೋಂಕು ತಗುಲಿದೆ, ತಹಸೀಲ್ದಾರ್ ಆದೇಶದಲ್ಲೇನಿದೆ?

 

 

ಸುದ್ದಿ ಕಣಜ.ಕಾಂ | TALUK | HEALTH NEWS
ಭದ್ರಾವತಿ: ತಾಲೂಕಿನ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೊರೊನಾ ಸೋಂಕು ಉಲ್ಬಣವಾಗಿರುವ ಹಿನ್ನೆಲೆ ಶಂಕರಘಟ್ಟ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.
ಕಂಟೈನ್ಮೆಂಟ್ ಜೋನ್ ನಿರ್ವಹಣೆಗೆ ಬಿ.ಆರ್.ಪಿ. ಸಹಾಯಕ ಎಂಜಿನಿಯರ್ ರಾಜಕುಮಾರ್ (9742768098) ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನಿಯೋಜನೆ ಮಾಡಲಾಗಿದೆ. ಇವರು ಗ್ರಾಮದ ಪೂರ್ಣ ಉಸ್ತುವಾರಿಯನ್ನು ನಿರ್ವಹಿಸಲಿದ್ದಾರೆ.

BDVT FB GROUP LINK

ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಂಕರಘಟ್ಟ ಗ್ರಾಮದಲ್ಲಿ ಒಟ್ಟು 214 ಮನೆ, 25 ಅಂಗಡಿ, ಕಚೇರಿಗಳು, ಒಟ್ಟು 1,345 ಜನಸಂಖ್ಯೆ ಇದೆ. ಸೋಂಕು ಇನ್ನಷ್ಟು ಉಲ್ಬಣ ಆಗದಂತೆ ಕ್ರಮವಹಿಸಬೇಕು ಎಂದು ಭದ್ರಾವತಿ ತಹಸೀಲ್ದಾರ್ ಪ್ರದೀಪ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕುವೆಂಪು ವಿವಿಯ ಗ್ರಂಥಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿ ಒಟ್ಟು 24 ಜನರಿಗೆ ಕೊರೊನಾ ಸೋಂಕು ತಗುಲಿದೆ. ಇದರಲ್ಲಿ ಐವರು ಸಿಬ್ಬಂದಿ ಹಾಗೂ 19 ವಿದ್ಯಾರ್ಥಿಗಳಿದ್ದಾರೆ.

error: Content is protected !!