ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ವಿನೋಬನಗರ 60 ಅಡಿ ರಸ್ತೆಯಲ್ಲಿರುವ ಇಂಡ್ರಸ್ಟ್ರಿಯಲ್ ಏರಿಯಾದ ಬೀಗ ಹಾಕಿದ ಕಾಂಪ್ಲೆಕ್ಸ್ ವೊಂದರಲ್ಲಿ ಕುಳಿತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ವಿನೋಬನಗರದ ನವೀನ್ (19), ಶರಾವತಿನಗರದ ಕೃಷ್ಣ(19), ಆಯನೂರ್ ಗೇಟ್ ನಿವಾಸಿ ಉಲ್ಲಾಸ್ (19), ಶರಾವತಿ ನಗರದ ರಾಕೇಶ್ (19) ಬಂಧಿತರು.
ಪೊಲೀಸರನ್ನು ಕಂಡು ಕತ್ತಲೆಯಲ್ಲಿ ಓಡಿಹೋಗಲು ಯುವಕರು ಯತ್ನಿಸಿದ್ದಾರೆ. ಆಗ ಪೊಲೀಸರು ಅವರನ್ನು ಬೆನ್ನಟ್ಟಿ ಹಿಡಿದ್ದಿದ್ದು, ಇಲ್ಲಿ ಕುಳಿತಿರುವ ಬಗ್ಗೆ ವಿಚಾರಿಸಿದಾಗ ಸರಿಯಾದ ಕಾರಣ ನೀಡುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ, ಅವರನ್ನು ಬಂಧಿಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.