ಶೀಘ್ರವೇ ಹೊರ ಬೀಳಲಿದೆ ಅಡಿಕೆ ಸಂಶೋಧನಾ ಪೂರ್ಣ ವರದಿ, ಕ್ಯಾನ್ಸರ್ ಕಾರಕ ಹಣೆಪಟ್ಟಿ ಅಳಿಸಲು ಯತ್ನ

 

 

ಸುದ್ದಿ ಕಣಜ.ಕಾಂ | KARNATAKA | ARECANUT REPORT
ಶಿವಮೊಗ್ಗ: ಅಡಿಕೆಯಲ್ಲಿ ಔಷಧೀಯ ಗುಣ ಇದೆ ಎಂಬುವುದನ್ನು ಸಾಬೀತು ಪಡಿಸಲು ಸಂಶೋಧನೆ ನಡೆಸಲಾಗುತ್ತಿದೆ. ಈಗಾಗಲೇ ಮಧ್ಯಂತರ ವರದಿಯನ್ನು ನೀಡಿದ್ದು, ಶೀಘ್ರವೇ ಪೂರ್ಣ ವರದಿ ಬರಲಿದೆ ಎಂದು ಗೃಹ ಸಚಿವ ಹಾಗೂ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಡಿಕೆ ಸಂಶೋಧನೆ ಗುಣಗಳ ಬಗ್ಗೆ ಎಂ.ಎಸ್.ರಾಮಯ್ಯ ಸಂಸ್ಥೆಯಲ್ಲಿ ಸಂಶೋಧನೆ ನಡೆಸಲಾಗುತ್ತಿದೆ ಎಂದರು.

READ | ರಾಶಿ ಬೆಲೆ ಸಿದ್ದಾಪುರದಲ್ಲಿ ಏರಿಕೆ, ಶಿವಮೊಗ್ಗದಲ್ಲಿ ಇಳಿಕೆ, 21/01/2022ರ ಅಡಿಕೆ ಧಾರಣೆ

ನಂದಿತಾ ಸಾವಿನ ಸಾಕ್ಷ್ಯವೇ ಮಣ್ಣು ಪಾಲು
ಜನವರಿ 30 ರಂದು ಸಿಬಿಐಗೆ ಒಪ್ಪಿಸುವ ಸಂಬಂಧ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಈಗಾಗಲೇ, ನಂದಿತಾ ಸಾವು ಪ್ರಕರಣದ ಸಾಕ್ಷಿ ನಾಶವಾಗಿದೆ. ಹೀಗಿರುವಾಗ, ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ನಂದಿತಾ ಪ್ರಕರಣದ ಮೂಲಕ ಕಿಮ್ಮನೆ ರತ್ನಾಕರ್ ಅವರು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ನಂದಿತಾ ಪ್ರಕರಣದಲ್ಲಿ ಭಾಗವಹಿಸಿದ ಹೋರಾಟಗಾರರ ಮೇಲೆ ಪ್ರಕರಣ ದಾಖಲಾಗಲು ಕಿಮ್ಮನೆ ರತ್ನಾಕರ್ ಅವರು ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿದರು.
ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಮಾಧ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ಉಪಸ್ಥಿತರಿದ್ದರು.

https://www.suddikanaja.com/2021/06/09/kerc-order-to-increase-the-electricity-tariff-rate/

error: Content is protected !!