ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೊರೊನಾ ಸೋಂಕಿತರ ಸಂಖ್ಯೆ ಶನಿವಾರ 800ರ ಗಡಿ ದಾಟಿದ್ದು, ಮೂರನೇ ಅಲೆಯಲ್ಲಿ ಐದನೇ ಸಾವು ಸಂಭವಿಸಿದೆ.
870 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 365 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸೋಂಕಿತರಲ್ಲಿ 58 ಜನ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿಸಿಎಚ್.ಸಿಯಲ್ಲಿ 27, ಖಾಸಗಿ ಆಸ್ಪತ್ರೆಯಲ್ಲಿ 9, ಮನೆ ಆರೈಕೆಯಲ್ಲಿ 2,653 ಹಾಗೂ ಟ್ರಯಾಜ್ ನಲ್ಲಿ 58 ಜನರಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 2,805ಕ್ಕೆ ಹೆಚ್ಚಿದೆ.
READ | ಶಿವಮೊಗ್ಗದಲ್ಲಿ ಗಾಂಜಾ ಹಾವಳಿ, ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ಶಿವಮೊಗ್ಗ ತಾಲೂಕಿನಲ್ಲಿ ದಾಖಲೆಯ ಸೋಂಕು
ಶಿವಮೊಗ್ಗ ತಾಲೂಕಿನಲ್ಲಿ 359, ಭದ್ರಾವತಿಯಲ್ಲಿ 161, ತೀರ್ಥಹಳ್ಳಿಯಲ್ಲಿ 45, ಶಿಕಾರಿಪುರ 46, ಸಾಗರದಲ್ಲಿ 118, ಹೊಸನಗರದಲ್ಲಿ 99, ಸೊರಬದಲ್ಲಿ 28 ಹಾಗೂ ಬಾಹ್ಯ ಜಿಲ್ಲೆಯ 14 ಜನರಿಗೆ ಸೋಂಕು ದೃಢಪಟ್ಟಿದೆ.
ಶಿಕ್ಷಣ ಸಂಸ್ಥೆಗಳಲ್ಲೂ ಸೋಂಕು ಉಲ್ಬಣ
ಶಿಕ್ಷಣ ಸಂಸ್ಥೆಗಳಲ್ಲಿ 99 ಮಾದರಿಗಳನ್ನು ಸಂಗ್ರಹಿಸಿದ್ದು, ಹಿಂದಿನದ್ದೂ ಸೇರಿ ಇಂದು ಒಟ್ಟು 228 ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ.