ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಕೋವಿಡ್ ಸೋಂಕಿನಿಂದ ಮೃತಪಡುವವರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಭಾನುವಾರ ಕೂಡ ಒಬ್ಬರು ಮೃತಪಟ್ಟಿದ್ದು, ಇದುವರೆಗೆ ಸೋಂಕಿನಿಂದ 1,078 ಜನರು ನಿಧನರಾಗಿದ್ದಾರೆ.
518 ಜನರಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಕೋವಿಡ್ ಆಸ್ಪತ್ರೆಯಲ್ಲಿ 61, ಡಿಸಿಎಚ್.ಸಿಯಲ್ಲಿ 40, ಖಾಸಗಿ ಆಸ್ಪತ್ರೆಯಲ್ಲಿ 16, ಮನೆ ಆರೈಕೆಯಲ್ಲಿ 2,914, ಟ್ರಯಾಜ್ ನಲ್ಲಿ 39 ಜನ ಸೋಂಕಿತರಿದ್ದಾರೆ. ಜಿಲ್ಲೆಯಲ್ಲಿ 3,070 ಸಕ್ರಿಯ ಪ್ರಕರಣಗಳಿವೆ.
ಶಿವಮೊಗ್ಗದಲ್ಲಿ 180, ಭದ್ರಾವತಿಯಲ್ಲಿ 78, ತೀರ್ಥಹಳ್ಳಿಯಲ್ಲಿ 42, ಶಿಕಾರಿಪುರದಲ್ಲಿ 79, ಸಾಗರದಲ್ಲಿ 68, ಹೊಸನಗರದಲ್ಲಿ 31, ಸೊರಬದಲ್ಲಿ 26 ಹಾಗೂ ಹೊರ ಜಿಲ್ಲೆಯ 14 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಇಂದು 693 ಮಾದರಿಗಳನ್ನು ಸಂಗ್ರಹಿಸಿದ್ದು, ಹಿಂದಿನದ್ದೂ ಸೇರಿ 2,050 ವರದಿಗಳು ನೆಗೆಟಿವ್ ಬಂದಿವೆ. ಶಿಕ್ಷಣ ಸಂಸ್ಥೆಯಲ್ಲಿ 150 ಜನರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.