ಶಿವಮೊಗ್ಗದಲ್ಲಿ 3 ಸಾವಿರ ಗಡಿ ದಾಟಿದ ಕೊರೊನಾ ಸಕ್ರಿಯ ಕೇಸ್, ಯಾವ ಜಿಲ್ಲೆಯಲ್ಲಿ ಎಷ್ಟು ಪಾಸಿಟಿವ್

 

 

ಸುದ್ದಿ ಕಣಜ.ಕಾಂ | DISTRICT | HEALTH NEWS
ಶಿವಮೊಗ್ಗ: ಜಿಲ್ಲೆಯಲ್ಲಿ ಪ್ರಸ್ತುತ 3,050 ಸಕ್ರಿಯ ಪ್ರಕರಣಗಳಿದ್ದು, ಮಂಗಳವಾರ 343 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. 388 ಜನ ಗುಣಮುಖರಾಗಿದ್ದಾರೆ.
ಕೋವಿಡ್ ಆಸ್ಪತ್ರೆಯಲ್ಲಿ 63, ಡಿಸಿಎಚ್.ಸಿಯಲ್ಲಿ 22, ಖಾಸಗಿ ಆಸ್ಪತ್ರೆಯಲ್ಲಿ 11, ಮನೆ ಆರೈಕೆಯಲ್ಲಿ 2,944, ಟ್ರಯಾಜ್ ನಲ್ಲಿ 10 ಜನ ಸೋಂಕಿತರಿದ್ದಾರೆ.

READ |  ‘ಪ್ರಕಾಶ್’ ಟ್ರಾವೆಲ್ಸ್ ಮಾಲೀಕರ ರೋಚಕ ಬದುಕು, ಪ್ರತಿ ನವೋದ್ಯಮಿಗೂ ಮಾದರಿ, ಅವರ ಬಗ್ಗೆ ತಿಳಿದುಕೊಳ್ಳಲೇಬೇಕಾದ ಅಂಶಗಳಿವು

ಇಂದು 2,795 ಮಾದರಿಗಳನ್ನು ಸಂಗ್ರಹಿಸಿದ್ದು, ಹಿಂದಿನದ್ದೂ ಸೇರಿ 2,466 ವರದಿಗಳು ನೆಗೆಟಿವ್ ಬಂದಿವೆ. ಶಿಕ್ಷಣ ಸಂಸ್ಥೆಯಲ್ಲಿ 595 ಮಾದರಿಗಳನ್ನು ಸಂಗ್ರಹಿಸಿದ್ದು, 60 ಪಾಸಿಟಿವ್ ಬಂದಿವೆ.
ಶಿವಮೊಗ್ಗದಲ್ಲಿ 124, ಭದ್ರಾವತಿಯಲ್ಲಿ 60, ತೀರ್ಥಹಳ್ಳಿಯಲ್ಲಿ 22, ಶಿಕಾರಿಪುರದಲ್ಲಿ 51, ಸಾಗರದಲ್ಲಿ 35, ಹೊಸನಗರದಲ್ಲಿ 18, ಸೊರಬದಲ್ಲಿ 17 ಹಾಗೂ ಹೊರ ಜಿಲ್ಲೆಯ 16 ಜನರಿಗೆ ಕೊರೊನಾ ಸೋಂಕು ತಗುಲಿದೆ.

error: Content is protected !!