KPTCL recruitment 2022 | ಎಂಜಿನಿಯರ್, ಸಹಾಯಕ ಹುದ್ದೆಗಳಿಗೆ ಡಿಟೇಲ್ಡ್ ಅಧಿಸೂಚನೆ, ಎಷ್ಟು ಹುದ್ದೆಗಳ ಭರ್ತಿ, ಆಯ್ಕೆ ವಿಧಾನ ಹೇಗೆ?

 

 

ಸುದ್ದಿ ಕಣಜ.ಕಾಂ | KARNATAKA | JOB JUNCTION
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ನಲ್ಲಿ 1,492 ಹುದ್ದೆಗಳ ಭರ್ತಿಗೆ ವಿವರವಾದ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಕಿರಿಯ ಸಹಾಯಕ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

JOBS FB Linkಯಾವ ಹುದ್ದೆಗಳು ಎಷ್ಟು ಖಾಲಿ
ಬೆಸ್ಕಾಂ, ಸೆಸ್ಕ್, ಹೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಆಡಳಿತ ವ್ಯಾಪ್ತಿಯ ಕಚೇರಿಗಳಲ್ಲಿ ಖಾಲಿ ಇರುವ ಮಿಕ್ಕುಳಿದ ಪದ ವೃಂದದ 399 ಸಹಾಯಕ ಎಂಜಿನಿಯರ್ (ವಿದ್ಯುತ್), 21 ಸಹಾಯಕ ಎಂಜಿನಿಯರ್ (ಸಿವಿಲ್), 486 ಕಿರಿಯ ಎಂಜಿನಿಯರ್(ವಿ), 21, ಕಿರಿಯ ಎಂಜಿನಿಯರ್ (ಸಿವಿಲ್), 357 ಕಿರಿಯ ಸಹಾಯಕ ಹುದ್ದೆಗಳನ್ನು ಹಾಗೂ 371(ಜೆ) ಅಡಿ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿ ಗುರುತಿಸಲ್ಪಟ್ಟ ಸ್ಥಳೀಯ ಪದವೃಂದದ 106 ಸಹಾಯಕ ಎಂಜಿನಿಯರ್(ವಿ), 7 ಸಹಾಯಕ ಎಂಜಿನಿಯರ್ (ಸಿ), 84 ಕಿರಿಯ ಎಂಜಿನಿಯರ್ (ವಿ), 8 ಕಿರಿಯ ಎಂಜಿನಿಯರ್(ಸಿ), 3 ಕಿರಿಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಹ್ವಾನಿಸಲಾಗಿದೆ. ಶೈಕ್ಷಣಿಕ ವಿದ್ಯಾರ್ಹತೆಯ ಪೂರ್ಣ ವಿವರಕ್ಕಾಗಿ ಅಧಿಸೂಚನೆಯನ್ನು ಓದಿ.

READ | ಎಸ್ಸೆಸ್ಸೆಲ್ಸಿ ಪಾಸ್ ಆದವರಿಗೆ ಕೆಸಿಸಿ ಬ್ಯಾಂಕ್ ನಲ್ಲಿ ಉದ್ಯೋಗ, ಆಕರ್ಷಕ ಸಂಬಳ, ಈಗಲೇ ಅರ್ಜಿ ಸಲ್ಲಿಸಿ

ಪ್ರಮುಖ ದಿನಾಂಕಗಳು
ಅರ್ಜಿ ಪ್ರಾರಂಭಿಕ ದಿನಾಂಕ 07.02.2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 07.03.2022
ಶುಲ್ಕ ಪಾವತಿಸಲು ಕೊನೆಯ ದಿನಾಂಕ 09.03.2022
ಅರ್ಜಿ ಶುಲ್ಕದ ಬಗ್ಗೆ ಮಾಹಿತಿ
ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಪ್ರವರ್ಗ 1, 2(ಎ), 2(ಬಿ), 3(ಎ), 3(ಬಿ)ಗೆ 600 ರೂಪಾಯಿ ಹಾಗೂ ಎಸ್.ಸಿ., ಎಸ್.ಟಿ ಅಭ್ಯರ್ಥಿಗಳು 350 ರೂಪಾಯಿ ಹಾಗೂ ವಿಕಲಚೇತನ ಅಭ್ಯರ್ಥಿಗಳು ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ವಯೋಮಿತಿ ಸಡಿಲಿಕೆಗಳು
ಎಲ್ಲ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳು 38 ವರ್ಷ, ಎಸ್.ಸಿ, ಎಸ್.ಟಿ ಹಾಗೂ ಪ್ರವರ್ಗ 1ಕ್ಕೆ ಸೇರಿದ 40 ವರ್ಷಗಳು. ನಿಗಮ/ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸೇವೆ ಸಲ್ಲಿಸಿರುವಷ್ಟು ವರ್ಷಗಳು ಅಥವಾ 10 ವರ್ಷಗಳ ಅವಧಿ, ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು ಅನ್ವಯವಾಗಲಿವೆ. ಮಾಜಿ ಸೈನಿಕರಿಗೆ ಗರಿಷ್ಠ 45 ವರ್ಷಗಳು, ವಿಕಲಚೇತನರಿಗೆ 10 ವರ್ಷಗಳು ಹಾಗೂ ಕೆಪಿಟಿಸಿಎಲ್, ಎಸ್ಕಾಂಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಅಭ್ಯರ್ಥಿಗಳಿಗೆ ಕನಿಷ್ಠ 5 ಮತ್ತು ಅದಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಅಭ್ಯರ್ಥಿಗಳು. (ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಮಾತ್ರ).
ಆಯ್ಕೆ ವಿಧಾನ
ನೇಮಕಾತಿಯನ್ನು ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಅರ್ಹತೆಯ ಆಧಾರದ ಮೇಲೆ ಮಾತ್ರ ನೇಮಕ ಮಾಡಲಾಗುವುದು. ಪರೀಕ್ಷೆಯಲ್ಲಿ ಕನಿಷ್ಠ ಶೇ.35ರಷ್ಟು ಅಂಕಗಳನ್ನು ಗಳಿಸಬೇಕು.

   NOTIFICATION

   WEBSITE

https://www.suddikanaja.com/2022/01/25/karnataka-electricity-transmission-corporation-limited-kptcl-has-announced-good-news-for-the-job-seekers-vacancies-are-available-for-application/

error: Content is protected !!