ಉದ್ಯೋಗ ಕೊಡಿಸುವುದಾಗಿ ನಂಬಿಸಿ 2.63 ಲಕ್ಷ ರೂ. ಮೋಸ

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಬೆಂಗಳೂರಿನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2,63,280 ಲಕ್ಷ ರೂಪಾಯಿ ಮೋಸ ಮಾಡಿರುವ ಘಟನೆ ನಡೆದಿದೆ.
ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ವ್ಯಕ್ತಿಯೊಬ್ಬರು ಹಣ ನೀಡಿ ಮೋಸ ಹೋಗಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಮಾಸಿಕ 70-80 ಸಾವಿರ ರೂಪಾಯಿ ಸಂಬಳದ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ.

READ | KPTCL recruitment 2022, ಎಂಜಿನಿಯರ್, ಸಹಾಯಕ ಹುದ್ದೆಗಳಿಗೆ ಡಿಟೇಲ್ಡ್ ಅಧಿಸೂಚನೆ, ಎಷ್ಟು ಹುದ್ದೆಗಳ ಭರ್ತಿ, ಆಯ್ಕೆ ವಿಧಾನ ಹೇಗೆ?

ಮೋಸ ಹೋಗಿದ್ದು ಹೇಗೆ?
2020ರ ಅಕ್ಟೋಬರ್ ನಲ್ಲಿ ಆನ್ ಲೈನ್ ತಂತ್ರಾಂಶವೊಂದರಲ್ಲಿ ಪರಿಚಯವಾಗಿದ್ದು, ಉದ್ಯೋಗ ಅರಸುತ್ತಿದ್ದ ವ್ಯಕ್ತಿಗೆ ಮೊಬೈಲ್ ನಂಬರ್ ನೀಡಿದ್ದಾನೆ. ಅದಕ್ಕೆ ಹಂತ ಹಂತವಾಗಿ 2021ರ ಏಪ್ರಿಲ್ 24ರಿಂದ ಅಕ್ಟೋಬರ್ 28ರ ವರೆಗೆ ಹಣ ವರ್ಗಾಯಿಸಿದ್ದಾರೆ. ಹಣ ಪಡೆದು ಕೆಲಸವನ್ನೂ ಕೊಡಿಸದೇ ಹಣವನ್ನೂ ವಾಪಸ್ ಕೊಡದೇ ಮೋಸ ಮಾಡಿದ್ದು, ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!