ಭದ್ರಾವತಿಯ ಗುಡಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ್ದ ನಾಲ್ವರಿಗೆ ಜೈಲು ಶಿಕ್ಷೆ, ದಂಡ

 

 

ಸುದ್ದಿ ಕಣಜ.ಕಾಂ | DISTRICT | COURT NEWS
ಶಿವಮೊಗ್ಗ: ಶಂಕರಘಟ್ಟ ಗ್ರಾಮದ ಮನೆ ಹಾಗೂ ಗುಡಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ್ದ ನಾಲ್ವರು ಆರೋಪಿಗಳಿಗೆ ನಾಲ್ಕು ವರ್ಷಗಳ ಶಿಕ್ಷೆ, 10 ಸಾವಿರ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ರಘು ಅಲಿಯಾಸ್ ಚಿನ್ನು, ರಘು ಅಲಿಯಾಸ್ ಬೆಂಗಳೂರು ರಘು, ಆನಂದ್ ಅಲಿಯಾಸ್ ದೊಡ್ಡ ನಂದ, ಆನಂದ್ ಅಲಿಯಾಸ್ ಚಿನ್ನ ಅವರಿಗೆ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಮಿಲನಾ ಆದೇಶ ಹೊರಡಿಸಿದ್ದಾರೆ.

BDVT FB GROUP LINK

READ | ಚಲಿಸುತ್ತಿದ್ದ ಬಸ್ ಹೋದ ವಿದ್ಯಾರ್ಥಿ ಕೆಳಗೆ ಬಿದ್ದ ವಿಡಿಯೋ ವೈರಲ್

ಎಲ್ಲೆಲ್ಲಿ ಕಳ್ಳತನ, ಏನು ಪ್ರಕರಣ?
2017ರ ಮೇ 9ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಂಕರಘಟ್ಟ ಗ್ರಾಮದ ವಾಸಿಯೊಬ್ಬರ ಮನೆಯ ಬಾಗಿಲನ್ನು ಮುರಿದು ಕಳ್ಳತನಕ್ಕೆ ಪ್ರಯತ್ನಪಟ್ಟಿದ್ದರು. ಈ ಬಗ್ಗೆ ಐಪಿಸಿ ಕಲಂ 457, 380, 511 ಅನ್ವಯ ಪ್ರಕರಣ ದಾಖಲಾಗಿತ್ತು.
2018ರ ಜೂನ್ 29ರಂದು ರಾತ್ರಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಾಪುರ ಗ್ರಾಮದಲ್ಲಿನ ಗುಡಿಬಂಡೆ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಹುಂಡಿಯ ಹಣ ಮತ್ತು ಆಭರಣಗಳನ್ನು ಕಳ್ಳತನ ಮಾಡಲಾಗಿತ್ತು. ಐಪಿಸಿ ಕಲಂ 457, 380 ಐಪಿಸಿ ಅನ್ವಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಭದ್ರಾವತಿ ಗ್ರಾಮಾಂತ ಠಾಣೆಯ ಪಿಎಸ್.ಐ ಮಂಜುನಾಥ್ ತನಿಖೆ ಕೈಗೊಂಡು ಎರಡೂ ಪ್ರಕರಣಗಳಲ್ಲಿ ಭಾಗಿಯಾದವರನ್ನು ಬಂಧಿಸಿ ಅವರಿಂದ ಕಳ್ಳತನ ಮಾಡಿದ ಸಾಮಗ್ರಿಗಳನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

READ | ಮಾಡರ್ನ್ ಟಾಕೀಸ್ ಬಳಿ ಬೆಂಕಿ ಅವಘಡಕ್ಕೆ ಕಾರಣವೇನು ಗೊತ್ತಾ?

ಆರೋಪಿಗಳ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಸಿಜೆ ಮತ್ತು ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರು 4 ಜನ ಆರೋಪಿಗಳಿಗೆ ನಾಲ್ಕು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ ದಂಡ ಮತ್ತು ದಂಡ ಕಟ್ಟಲು ವಿಫಲರಾದಲ್ಲಿ ಆರು ತಿಂಗಳ ಸಾದಾ ಕಾರವಾಸ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಎಪಿಪಿ ಮಂಜುನಾಥ್ ವಾದ ಮಂಡಿಸಿದ್ದರು.

https://www.suddikanaja.com/2021/09/10/bheemeshwar-temple/

error: Content is protected !!