ಹಿಂಸಾ ಸ್ವರೂಪದ ಪಡೆದ ಹಿಜಾಬ್- ಕೇಸರಿ ಶಾಲು ವಿವಾದ, ಬಸ್ ಮೇಲೆ ಕಲ್ಲು ತೂರಾಟ

 

 

ಸುದ್ದಿ ಕಣಜ.ಕಾಂ | TALUK | CRIME NEWS
ಶಿಕಾರಿಪುರ: ಪಟ್ಟಣದಲ್ಲಿ ಖಾಸಗಿ ಬಸ್ ವೊಂದರ ಮೇಲೆ ಕಲ್ಲು ತೂರಾಟ ಮಾಡಿದ ಘಟನೆಯು ಮಂಗಳವಾರ ಬೆಳಗ್ಗೆ ನಡೆದಿದೆ.

READ | ಹಿಜಾಬ್ ವಿವಾದ, ಶಿವಮೊಗ್ಗದಲ್ಲಿ ಲಾಠಿ ಚಾರ್ಜ್, ಕಲ್ಲು ತೂರಾಟ, ಉದ್ವಿಗ್ನ ಸ್ಥಿತಿ, ಸ್ಥಳದಲ್ಲೇ ಬೀಡು ಬಿಟ್ಟ ಡಿಸಿ, ಎಸ್‍ಪಿ

ಕಾಲೇಜು ಬಳಿ ಇರುವ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಪೊಲೀಸರು ಗುಂಪನ್ನು ಚದುರಿಸಲು ಹರಸಾಹಸ ಪಡುತಿದ್ದಾರೆ.
ಬೆಳಗ್ಗೆಯೇ ಕಾಲೇಜು ಆವರಣದಲ್ಲಿ ಪ್ರತಿಭಟನೆ ಮಾಡಲಾಗುತಿತ್ತು. ಕಾಲೇಜಿನಿಂದ ಹೊರಗಡೆ ಬಂದ ವಿದ್ಯಾರ್ಥಿಗಳು ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದು, ಜನರು ಗಾಬರಿಗೆ ಒಳಗಾಗಿದ್ದಾರೆ. ನಂತರ, ಪೊಲೀಸರು ಬಸ್ ಅನ್ನು ನಿಲ್ಲಿಸಿ ಯೋಗಕ್ಷೇಮ ವಿಚಾರಿಸಿದ್ದಾರೆ.

error: Content is protected !!