ಅಡಿಕೆ, ಬಾಳೆ, ತೆಂಗು ತೋಟದಲ್ಲಿ ಕಾಡಾನೆ ದಾಂಧಲೆ, ತೋಟಕ್ಕೆ ಹೋಗುವುದಕ್ಕೂ ಜನರ ಭಯ

 

 

ಸುದ್ದಿ ಕಣಜ.ಕಾಂ | TALUK | ELEPHANT ATTACK
ಹೊಸನಗರ: ತಾಲೂಕಿನ ರಿಪ್ಪನಪೇಟೆಯ ಮೂಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಯ ತಳಲೆ ಸುತ್ತಮುತ್ತ ಕಾಡಾನೆ ಉಪಟಳ ಹೆಚ್ಚಿದ್ದು, ತೋಟಗಳಿಗೆ ನುಗ್ಗಿ ಸಲಗ ದಾಂಧಲೆ ಮಾಡಿದೆ.

READ | ಶಿವಮೊಗ್ಗದಲ್ಲಿ ಹುಲಿ ಗಣತಿ ಆರಂಭ, ಹೇಗೆ ನಡೆಯಲಿದೆ ಗಣತಿ?

ಬಾಳೆಕೊಡ್ಲು, ಗಕಚಿ, ಸುಳುಕೋಡು, ಕಾನುಗೋಡು ಗ್ರಾಮದ ತೋಟಗಳಿಗೆ ಕಾಡಾನೆ ನುಗ್ಗುತ್ತಿರುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ. ಕಳೆದ ವಾರವಷ್ಟೇ ಕಾರೆಹೊಂಡದ ರೈತರ ತೋಟಕ್ಕೆ ನುಗ್ಗಿದ ಆನೆಯು ಅಡಿಕೆ, ತೆಂಗಿನ ಮರಗಳನ್ನು ಉರುಳಿಸಿದೆ.
ಮಂಗಳವಾರ ರಾತ್ರಿಯೂ ತಳಲೆಯಲ್ಲಿ ಕಾಡಾನೆಯು ದಾಳಿ ಮಾಡಿದ್ದು ಬಾಳೆ ಮತ್ತು ಅಡಿಕೆಯ ಮರಗಳನ್ನು ಬೀಳಿಸಿದೆ. ಅದರಲ್ಲೂ ಒಂಟಿ ಮನೆಗಳಲ್ಲಿ ವಾಸಿಸುತ್ತಿರುವವರು ಭೀತಿಯಲ್ಲಿದ್ದಾರೆ.

error: Content is protected !!