ರಾಜ್ಯದಲ್ಲಿ ಫೆ.16ರ ವರೆಗೆ ಎಲ್ಲ ಕಾಲೇಜುಗಳಿಗೆ ರಜೆ

 

 

ಸುದ್ದಿ ಕಣಜ.ಕಾಂ | KARNATAKA | EDUCATION CORNER
ಬೆಂಗಳೂರು: ಹಿಜಾಬ್- ಕೇಸರಿ ಶಾಲು ವಿವಾದದ ಹಿನ್ನೆಲೆ ರಾಜ್ಯದಾದ್ಯಂತ ಉಂಟಾದ ಗಲಾಟೆಯಿಂದಾಗಿ ಕಾಲೇಜುಗಳಿಗೆ ಮೂರು ದಿನ ರಜೆ ನೀಡಿ ಘೋಷಿಸಿದ್ದ ಸರ್ಕಾರ ಸದ್ಯದ ಪರಿಸ್ಥಿತಿಯನ್ನು ಮನಗಂಡು ರಜೆಯನ್ನು ವಿಸ್ತರಣೆ ಮಾಡಿದೆ.

20220212 004930

READ | ಶಾಲಾ, ಕಾಲೇಜು ಆರಂಭ ಬಗ್ಗೆ ಸಿಎಂ ಪ್ರಮುಖ ಸಭೆ, ಕೈಗೊಂಡ ನಿರ್ಧಾರವೇನು? ಅಹಿತಕರ ಘಟನೆ ತಡೆಗೆ ಸ್ಥಳೀಯ ಆಡಳಿತಕ್ಕೆ ಫುಲ್ ಪವರ್

ಶುಕ್ರವಾರ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಲಾಗಿದ್ದು, ಅದರ ಪ್ರಕಾರ, ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲ ಕಾಲೇಜು, ವಿಶ್ವವಿದ್ಯಾಲಯ, ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಈ ಅವಧಿಯಲ್ಲಿ ಆನ್ಲೈನ್ ಕ್ಲಾಸ್ ಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಈಗಾಗಲೇ ನಿಗದಿಯಾಗಿರುವ ಮತ್ತು ನಡೆಯುತ್ತಿರುವ ಪರೀಕ್ಷೆಗಳಲ್ಲಿ ಯಾವ ಬದಲಾವಣೆಗಳೂ ಇರುವುದಿಲ್ಲ ಎಂದು ತಿಳಿಸಲಾಗಿದೆ.
ಪ್ರಸ್ತುತ ಫೆಬ್ರವರಿ 16ರವರೆಗೆ ಕಾಲೇಜುಗಳಿಗೆ ರಜೆ ಮುಂದುವರಿಯಲಿದ್ದು, ಅಂದಿನ ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ಆದರೆ, ಶಾಲೆಗಳು ಸೋಮವಾರದಿಂದ ಆರಂಭಗೊಳ್ಳಲಿವೆ. ಅದಕ್ಕಾಗಿ ಹಲವು ಖಡಕ್ ಸೂಚನೆಗಳನ್ನು ನೀಡಲಾಗಿದೆ.

https://www.suddikanaja.com/2021/04/28/new-ration-card-number-distribution/

error: Content is protected !!