ಭದ್ರಾವತಿಯಲ್ಲೂ ನಿಷೇಧಾಜ್ಞೆ, ಶಾಲೆಗಳಿಗೆ ರಜೆ, ಪರೀಕ್ಷೆ ಮುಂದೂಡಿಕೆ

 

 

ಸುದ್ದಿ ಕಣಜ.ಕಾಂ | TALUK | SECTION 144
ಭದ್ರಾವತಿ: ಸೀಗೆಹಟ್ಟಿ ಯುವಕನ ಹತ್ಯೆ ಬೆನ್ನಲ್ಲೇ ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿ ಇದ್ದು, ಮುಂಜಾಗ್ರತಾ ಕ್ರಮವಾಗಿ ಭದ್ರಾವತಿಯಲ್ಲೂ ನಿಷೇಧಾಜ್ಞೆ ಜಾರಿಗೊಳಿಸಿ ಭದ್ರಾವತಿ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ.

BDVT FB GROUP LINKಪ್ರತಿಬಂಧಕಾಜ್ಞೆ ಆದೇಶದಂತೆ ಭದ್ರಾವತಿ ನಗರದಲ್ಲಿ ಸೆಕ್ಷನ್ 144 ಜಾರಿ ಮಾಡಿರುವುದರಿಂದ ಫೆಬ್ರವರಿ 21ರಂದು ಒಂದನೇ ತರಗತಿಯಿಂದ 10ನೇ ತರಗತಿಯವರೆನ ಭದ್ರಾವತಿ ನಗರ ಭಾಗದ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿರುತ್ತದೆ.

READ | ಶಿವಮೊಗ್ಗದಲ್ಲಿ‌ ಬಿಗುವಿನ ವಾತಾವರಣ, ಪರಿಸ್ಥಿತಿ ತಹಬದಿಗೆ ಐಜಿ ದೌಡು

ಪರೀಕ್ಷೆ ಮುಂದೂಡಿಕೆ
ಎಸ್.ಎಸ್.ಎಲ್.ಸಿ ಪೂರ್ವಭಾವಿ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ಭದ್ರಾವತಿ ನಗರ ಭಾಗ ಹೊರತು ಪಡಿಸಿ ಭದ್ರಾವತಿ ಗ್ರಾಮಾಂತರ ವ್ಯಾಪ್ತಿಯಲ್ಲಿ ಶಾಲೆಗಳು ಯಥಾ ಪ್ರಕಾರ ಇರುತ್ತವೆ ಎಂದು ತಿಳಿಸಲಾಗಿದೆ.

error: Content is protected !!