ಅಂಗಡಿಗಳ ಮೇಲೆ ಕಲ್ಲು ತೂರಾಟ, ಶಿವಮೊಗ್ಗದಲ್ಲಿ ಉದ್ವಿಗ್ನ ಸ್ಥಿತಿ, ಶವಯಾತ್ರೆ ವೇಳೆ ಗಲಾಟೆ

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಭಜರಂಗ ದಳದ ಕಾರ್ಯಕರ್ತ ಹರ್ಷ(28) ಹತ್ಯೆ ಬೆನ್ನಲ್ಲೇ ನಗರದ ಸ್ಥಿತಿ ಉದ್ವಿಗ್ನಗೊಂಡಿದೆ. ಕೆಲವೆಡೆ ಕಲ್ಲು ತೂರಾಟ ಮಾಡಲಾಗಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಯಿಂದ ಕುಂಬಾರ ಬೀದಿಯಲ್ಲಿರುವ ಹರ್ಷ ಮನೆಯವರೆಗೆ ಶವಯಾತ್ರೆ ಮಾಡಲಾಗಿದೆ. ಈ ವೇಳೆ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಶವಯಾತ್ರೆ ವೇಳೆ ಓ.ಟಿ.ರಸ್ತೆಯಲ್ಲಿರುವ ಕೆಲವು ಅಂಗಡಿಗಳ ಬೋರ್ಡ್ ಗಳನ್ನು ಕಿತ್ತೊಗೆಯಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಹಳೇ ಶಿವಮೊಗ್ಗದಲ್ಲಿ ಕೆಎಸ್.ಆರ್‍ಪಿ. ರ್ಯಾಪಿಡ್ ಆಕ್ಷನ್ ಫೋರ್ಸ್(ಆರ್.ಎ.ಎಫ್) ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಭಾನುವಾರ ರಾತ್ರಿ ಊಟಕ್ಕೆಂದು ಹೊರಗಡೆ ಹೋದಾಗ ಯಾರೋ ದುಷ್ಕರ್ಮಿಗಳು ಎನ್.ಟಿ.ರಸ್ತೆಯಲ್ಲಿರುವ ಕಾಂತ್ ಪೆಟ್ರೋಲ್ ಬಂಕ್ ಎದುರು ಭಾರತಿ ಕಾಲೋನಿ ಕ್ರಾಸ್ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿವಿಧೆಡೆ ಉದ್ರಿಕ್ತ ಗುಂಪೊಂದು ಗಲಾಟೆ ಮಾಡಿದೆ. ವಾಹನಗಳಿಗೆ ಬೆಂಕಿ ಇಟ್ಟಿದೆ. ತಕ್ಷಣ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ನಾನಾ ಕಡೆಗಳಿಂದ ಪೊಲೀಸರನ್ನು ಜಿಲ್ಲೆಗೆ ನಿಯೋಜಿಸಲಾಗಿದೆ. ಎಲ್ಲ ಕಡೆಗಳಲ್ಲಿ ಪೊಲೀಸರು ಗಸ್ತಿನಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಾರೆ.
ಬೈಕ್ ಗಳಿಗೆ ಬೆಂಕಿಯಿಟ್ಟಿದ್ದು, ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದಾರೆ.

https://www.suddikanaja.com/2022/02/08/hijab-saffron-controversy-lathi-charge-in-shivamogga/

error: Content is protected !!