ಉಕ್ರೇನ್ ನಲ್ಲಿ ಶಿವಮೊಗ್ಗದ ಇಬ್ಬರು, ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?

 

 

ಸುದ್ದಿ ಕಣಜ.ಕಾಂ | NATIONAL | UKRAINE 
ಶಿವಮೊಗ್ಗ: ಉಕ್ರೇನ್ ನಲ್ಲಿ ಶಿವಮೊಗ್ಗ ಮೂಲದ ಇಬ್ಬರು ನೆಲೆಸಿದ್ದು, ತಾವು ಸೇಫ್ ಇರುವುದಾಗಿ ತಿಳಿಸಿದ್ದಾರೆ. ಪೋಷಕರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಭೇಟಿ ಮಾಡಿದ್ದು, ಅವರು ಅಭಯ ನೀಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿದ್ದೇ ವಿಶ್ವವೇ ನಿಬ್ಬೆರಗಾಗಿದೆ. ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗದಿಂದ ಉಕ್ರೇನ್ ಗೆ ತೆರಳಿರುವವರ ಸಂಬಂಧಿಕರು, ಪೋಷಕರು ಆತಂಕದಲ್ಲಿದ್ದಾರೆ.

READ | ಶಿವಮೊಗ್ಗದಲ್ಲಿ ಶಾಲಾ ಕಾಲೇಜು ಪುನಾರಂಭಕ್ಕೆ ಡೇಟ್ ಫಿಕ್ಸ್

ಉಕ್ರೇನ್ ನಲ್ಲಿ ಸಂತೆಕಡೂರು ಯುವಕ
ಸಂತೆಕಡೂರು ಗ್ರಾಮದ ದೇವಕಿ ದಂಪತಿಗಳ ಪುತ್ರ ತೇಜಸ್ ಅವರು ಉಕ್ರೇನ್‍ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ಎರಡನೇ ವರ್ಷದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಗುರುವಾರ ಬೆಳಗ್ಗೆ ಕರೆ ಮಾಡಿ ಸೇಫ್ ಆಗಿರುವುದಾಗಿ ತಿಳಿಸಿದ್ದಾರೆ.
ಮಲ್ಲಿಗೇನಹಳ್ಳಿ ಯುವತಿ
ಮಲ್ಲಿಗೇನಹಳ್ಳಿಯ ನಿವಾಸಿ ಗಾನಶ್ರೀ ಅವರು ಉಕ್ರೇನ್ ನಲ್ಲಿದ್ದಾರೆ. ಅವರು ಎಂಡಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆರು ತಿಂಗಳ ಹಿಂದೆ ಅಲ್ಲಿಗೆ ತೆರಳಿದ್ದರು. ಇವರು ಸಹ ಕರೆ ಮಾಡಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ.
ಉಕ್ರೇನ್ ನಲ್ಲಿ ರಾಜ್ಯದ 10 ಜನ
ಉಕ್ರೇನ್‍ನಲ್ಲಿರುವ ರಾಜ್ಯದ 10 ಜನರು ಸುರಕ್ಷಿತವಾಗಿದ್ದಾರೆ. ಇದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಅವರೆಲ್ಲರನ್ನು ಸುರಕ್ಷಿತವಾಗಿ ವಾಸಪ್ ಸ್ವದೇಶಕ್ಕೆ ಕರೆದುಕೊಂಡು ಬರಲಾಗುವುದು.

READ | ಶಿವಮೊಗ್ಗದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಆಹ್ವಾನ

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಮಾತನಾಡಿದ್ದು, ಉಕ್ರೇನ್ ನಲ್ಲಿರುವ ಶಿವಮೊಗ್ಗದವರು ಸುರಕ್ಷಿತವಾಗಿದ್ದಾರೆ. ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ವಿಮಾನಯಾನ ಆರಂಭವಾದ ತಕ್ಷಣ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

https://www.suddikanaja.com/2021/08/07/home-minister-portfolio-to-aaraga-jnanedra/

error: Content is protected !!