ಎಸ್ಸೆಸ್ಸೆಲ್ಸಿ ಪಾಸ್ ಆದವರಿಗೆ ಶಿವಮೊಗ್ಗದ ನ್ಯಾಯಾಲಯದಲ್ಲಿ ಉದ್ಯೋಗ, ಕೂಡಲೇ ಅರ್ಜಿ ಸಲ್ಲಿಸಿ

 

 

ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ(shimoga court recruitment): ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಜವಾನ ಹಾಗೂ ಹಿಂಬಾಕಿ ಉಳಿದ 27 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ನೀಡಲಾದ ಲಿಂಕ್ ಮೂಲಕ ಫೆ.25 ರಿಂದ ಮಾರ್ಚ್ 24 ರವರೆಗೆ ಸಲ್ಲಿಸಬಹುದು.

READ | ಡಿಪ್ಲೊಮಾ, ಎಂಜಿನಿಯರಿಂಗ್ ಪಾಸ್ ಆದವರಿಗೆ ಐಆರ್.ಸಿಒಎನ್ ನಲ್ಲಿ 226 ಹುದ್ದದೆ, 40000 ಸಂಬಳ

ಅಭ್ಯರ್ಥಿಗಳು ಹೊಂದಿರಬೇಕಾದ ವಯೋಮಿತಿ
ಕನಿಷ್ಠ 18 ವರ್ಷ ಹಾಗೂ ಸಾಮಾನ್ಯ ವರ್ಗಕ್ಕೆ ಗರಿಷ್ಠ 35, 2ಎ, 2ಬಿ, 3ಎ, 3ಬಿ 38 ವರ್ಷಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಕ್ಕೆ ಗರಿಷ್ಠ 40 ವರ್ಷ ವಯೋಮಿತಿಯೊಳಗಿನ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ, ಕನ್ನಡ ಓದಲು ಮತ್ತು ಬರೆಯಲು ಬರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

READ | ಶಿವಮೊಗ್ಗದಲ್ಲಿ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಶುಲ್ಕ
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗ 200 ರೂಪಾಯಿ, ಪ್ರವರ್ಗ-2ಎ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು 100 ರೂಪಾಯಿಯನ್ನು ನೀಡಲಾದ ಲಿಂಕ್ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟೇಟ್ ಬ್ಯಾಂಕ್ ಕಲೆಕ್ಟ್ ಮೂಲಕ ಪಾವತಿಸತಕ್ಕದ್ದು. ಆನ್ ಲೈನ್ ಮೂಲಕ ಪಾವತಿ ಮಾಡಲು ಇಚ್ಚಿಸದೇ ಇರುವ ಅಭ್ಯರ್ಥಿಗಳು ಚಲನ್ ಪ್ರತಿಯನ್ನು ಅಧಿಕೃತ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಂಡು ಅದರ ಪ್ರಿಂಟೌಟ್ ಅನ್ನು ಪಡೆದುಕೊಂಡು ಎಸ್.ಬಿ.ಐನ ಯಾವುದೇ ಶಾಖೆಗೆ ಹಾಜರುಪಡಿಸಿ ಶುಲ್ಕವನ್ನು ಪಾವತಿಸತಕ್ಕದ್ದು.
ಹುದ್ದೆಗಳ ವರ್ಗೀಕರಣ, ವೇತನಶ್ರೇಣಿ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಇತರೆ ಸೂಚನೆಗಳು ಮತ್ತು ಹೆಚ್ಚಿನ ಮಾಹಿತಿಯನ್ನು ವೆಬ್ ಸೈಟ್ ಗೆ ಭೇಟಿ ನೀಡಿ ಪಡೆಯಬಹುದು.

OFFICIAL WEBSITE

OFFICIAL WEBSITE

NOTIFICATION

https://www.suddikanaja.com/2022/02/16/applications-are-invited-for-recruitment-of-756-posts-from-the-east-coast-railway-recruitment-cell-eligible-and-interested-candidates-can-apply/

error: Content is protected !!