ಶಿವಮೊಗ್ಗದಲ್ಲಿ ಬೆಳ್ಳಬೆಳಗ್ಗೆ ದಟ್ಟ ಮಂಜು, ವಾಹನ ಸವಾರರಿಗೆ ತೊಡಕು

 

 

ಸುದ್ದಿ ಕಣಜ.ಕಾಂ | DISTRICT | WEATHER REPORT
ಶಿವಮೊಗ್ಗ: ಈಗಾಗಲೇ ಬೇಸಿಗೆ ಆರಂಭಗೊಂಡಿದೆ. ಮಧ್ಯಾಹ್ನದ ಹೊತ್ತಿನಲ್ಲಿ ಸುಡುವ ಬಿಸಿಲಿನ ಅನುಭವವಾಗುತ್ತಿದೆ. ಆದರೆ, ಮಂಗಳವಾರ ಬೆಳಗಿನ ಜಾವ ಮಾತ್ರ ಶಿವಮೊಗ್ಗದಲ್ಲಿ ದಟ್ಟ ಮಂಜು ಮುಸುಕಿಕೊಂಡಿತ್ತು.

READ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ 2 ವರ್ಷದ ಪುಟಾಣಿ, ಸಾಧನೆ ಕೇಳಿದ್ರೆ ಅಚ್ಚರಿ ಗ್ಯಾರಂಟಿ

ಶಿವಮೊಗ್ಗ ನಗರ ಮತ್ತು ಗ್ರಾಮೀಣ ಪ್ರದೇಶದ ಎಲ್ಲೆಡೆ ಮಂಜು ಮುಸುಕಿದ ವಾತಾವರಣ ಕಂಡು ಬಂದಿದ್ದು ವಾಹನ ಸವಾರರ ಸಂಚಾರಕ್ಕೆ ತೊಡಕುಂಟಾಗಿದೆ.
ಮಂಜು ಮುಸುಕಿದ ವಾತಾವರಣದಿಂದಾಗಿ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ವಾಹನ ಸಂಚಾರಕ್ಕೂ ಅಡತಡೆಯುಂಟಾಯಿತು. ಸಾಗರ- ಶಿವಮೊಗ್ಗ ರಸ್ತೆಯಲ್ಲಂತೂ ಎದುರಗಡೆ ಆಗಮಿಸುವ ವಾಹನಗಳೂ ಕಾಣದಷ್ಟು ಮಂಜು ಆವೃತ್ತವಾಗಿತ್ತು.

error: Content is protected !!