ಹರ್ಷನ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ ಟಾಪ್ 3 ಪಾಯಿಂಟ್ಸ್

 

 

ಸುದ್ದಿ ಕಣಜ.ಕಾಂ | DISTRICT | HARSHA MURDER CASE
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹತ್ಯೆಯಾದ ಭಜರಂಗ ದಳದ ಕಾರ್ಯಕರ್ತ ಹರ್ಷನ ಮನೆಗೆ ಭಾನುವಾರ ಭೇಟಿ ನೀಡಿ ಸಾಂತ್ವನ ನೀಡಿದರು. ನಂತರ, ಸರ್ಕಾರದಿಂದ ಘೋಷಣೆಯಾದ 25 ಲಕ್ಷ ರೂಪಾಯಿ ಚೆಕ್ ನೀಡಿದರು. ಈ ವೇಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಇತರರು ಉಪಸ್ಥಿತರಿದ್ದರು.

READ | ಪೊಲೀಸ್ ಇಲಾಖೆ ಮಹತ್ವದ ಪ್ರಕಟಣೆ

ಯಡಿಯೂರಪ್ಪ ಹೇಳಿದ್ದೇನು?

  1. ಹರ್ಷ ಅವರ ಕೊಲೆ ಆರೋಪಿಗಳಿಗೆ ಮರಣ ದಂಡನೆಯನ್ನು ವಿಧಿಸ/ಬೇಕು. ಯಾವುದೇ ಕಾರಣಕ್ಕೂ ಜೈಲಿನಿಂದ ಹೊರಗಡೆ ಬರಬಾರದು. ಈ ಬಗ್ಗೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತರಲಾಗಿದೆ.
  2. ಸಮಾಜದಲ್ಲಿ ಎಲ್ಲ ಧರ್ಮೀಯರು ಸಹಬಾಳ್ವೆಯಿಂದ ಬದುಕಬೇಕು. ಯಾವುದೇ ಕಾರಣಕ್ಕೂ ಯಾವ ಸಮುದಾಯದವರೂ ಉದ್ರೇಕರಾಗದೇ ಸಮಾಧಾನದಿಂದ ಇರಬೇಕು. ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸೆಗೆ ಧಕ್ಕೆ ತರಬಾರದು.
  3. ಹರ್ಷನ ಸಾವು ಖಂಡನೀಯವಾಗಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕುಟುಂಬದ ಸದಸ್ಯರಿಗೆ ಸಾಂತ್ವನದ ಹೊರತು ಮತ್ತೇನೂ ಹೇಳಲಾಗದು.

https://www.suddikanaja.com/2022/02/26/bajaranga-dal-activist-harsha-murdered-brutally-in-shivamogga-swamijis-visited-harshas-house/

error: Content is protected !!