ಶಂಕರಮಠ ರಸ್ತೆಯಲ್ಲಿ ಚಾಕು ಇರಿದ ದಸ್ತಗೀರ್ ಅಂದರ್

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಶಂಕರಮಠ ರಸ್ತೆಯ ವೀರಭದ್ರೇಶ್ವರ ಗ್ಯಾಸ್ ಬಂಕ್ ಎದುರು ಚಾಕು ಇರಿದು ಮಾರಣಾಂತಿಕ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

READ | ಶಂಕರಮಠ ರಸ್ತೆಯಲ್ಲಿ ವ್ಯಕ್ತಿಗೆ ಚಾಕು ಇರಿತ

ಆರ್.ಎಂ.ಎಲ್ ನಗರದ ಸಯ್ಯದ್ ದಸ್ತಗೀರ್(34) ಎಂಬಾತನನ್ನು ಬಂಧಿಸಲಾಗಿದೆ. ಈತ ಮಂಗಳವಾರ ರಾತ್ರಿ ಬಾಪೂಜಿನಗರ ಪಾಚಾ ಖಾನ್ (40) ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದ. ಪಾಚಾ ರಾತ್ರಿ ಮನೆಯ ಕಡೆಗೆ ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ದಸ್ತಗಿರ್ ಅಡ್ಡಗಟ್ಟಿ ಸಾಲದ ಹಣ ವಾಪಾಸ್ ಕೇಳಿದ್ದಾನೆ. ಈ ವೇಳೆ, ಜಗಳವಾಗಿದ್ದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹರಿತವಾದ ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.
ಐಪಿಸಿ ಕಲಂ 341, 504, 323, 324, 506, 307 ರೀತ್ಯಾ ಪ್ರಕರಣ ದಾಖಲಿಸಿಕೊಂಡ ಕೋಟೆ ಪೊಲೀಸರು ಪಿಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

error: Content is protected !!