ನಾಳೆಯಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶಿವಮೊಗ್ಗದಲ್ಲಿ ರೇಡಿಯೋ ಪಾಠ, ಯಾವ್ಯಾವ ವಿಷಯ ಬೋಧನೆ

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER 
ಶಿವಮೊಗ್ಗ: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ಮಕ್ಕಳಿಗೆ ಅನುಕೂಲವಾಗುವ ದೃಷ್ಟಿಯಿಂದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಇಲಾಖೆ (ಡಯಟ್) ವತಿಯಿಂದ ರೇಡಿಯೋ ಪಾಠಗಳು ನಡೆಸಲಾಗುತ್ತಿದೆ.
ಇದು ರೇಡಿಯೋ ಶಿವಮೊಗ್ಗ 90.8 ಎಫ್.ಎಂ. ನಲ್ಲಿ ಮಾರ್ಚ್ 14ರಿಂದ 20ರವರೆಗೆ ಪ್ರತಿದಿನ ಸಂಜೆ 7-8 ಗಂಟೆಯವರೆಗೆ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಸದುಪಯೋಗವನ್ನು ಎಸ್ಸೆಸ್ಸೆಲ್ಸಿ ವ್ಯಾಸಂಗ ನಡೆಸುತ್ತಿರುವ ಎಲ್ಲ ವಿದ್ಯಾರ್ಥಿಗಳು ಪಡೆಯುವಂತೆ ತಿಳಿಸಲಾಗಿದೆ.

READ | ಗಣಪತಿ ಕೆರೆಯಲ್ಲಿ ‘ಕೆರೆಹಬ್ಬ’, ಗುದ್ದಲಿ ಹಿಡಿದ ಶಾಸಕ ಹಾಲಪ್ಪ, ಪ್ರವಾಸಿ ತಾಣವಾಗಿಸಲು ಯತ್ನ

ಪಾಠಗಳು ಪ್ರಸಾರವಾಗಲಿರುವ ವೇಳಾಪಟ್ಟಿ

  • ಮಾರ್ಚ್ 14ರಂದು ಒತ್ತಡ ನಿರ್ವಹಣೆ/ ಪರೀಕ್ಷಾ ಭಯ ನಿವಾರಣೆ- ಡಾ. ಶಂಕರ್
  • 15ರಂದು ಕನ್ನಡ- ಅಣ್ಣಪ್ಪ, ಮಹೇಶ್ ಆಲೂರು
  • 16ರಂದು ಆಂಗ್ಲ ಭಾಷೆ- ಆಸೀಮುಲ್ಲಾ ಷರೀಫ್, ಇಮ್ರಾನ್
  • 17ರಂದು ಹಿಂದಿ- ಶಿವಶಂಕರ್, ವಾಣಿ
  • 18ರಂದು ಗಣಿತ- ರಘು
  • 19ರಂದು ವಿಜ್ಞಾನ- ವಿಜಯಕುಮಾರ್, ವಿಜಯಾನಂದರಾವ್
  • 20ರಂದು ಸಮಾಜ ವಿಜ್ಞಾನ- ಡಾ. ಶಂಕರ್

ರೇಡಿಯೋ ಶಿವಮೊಗ್ಗವು ಸಾಮಾನ್ಯ ರೇಡಿಯೋಗಳ ಜೊತೆಗೆ, ಮೊಬೈಲ್ ನಲ್ಲಿರುವ ಇನ್ ಬಿಲ್ಟ್ ಎಫ್ ಎಂ ಗಳಲ್ಲಿ ಪ್ರಸಾರವಾಗಲಿದೆ. ಇದರ ಜೊತೆಗೆ ಸ್ವಂತದ್ದೇ ಆಪ್ ಸಹ ಹೊಂದಿದ್ದು, ಅದನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7259176279 ಸಂಪರ್ಕಿಸಬಹುದು.

CLICK HERE FOR APP

https://www.suddikanaja.com/2021/09/03/fb-radio-starting-in-shivamogga/

error: Content is protected !!