ಶಿವಮೊಗ್ಗದಾದ್ಯಂತ ಹೈ ಸೆಕ್ಯೂರಿಟಿ, ಎಲ್ಲೆಲ್ಲಿ ಎಷ್ಟು ಭದ್ರತೆ, ಇಲ್ಲಿದೆ ಮಾಹಿತಿ

 

 

ಸುದ್ದಿ ಕಣಜ.ಕಾಂ | DISTRICT | HIJAB CONTROVERSY 
ಶಿವಮೊಗ್ಗ: ಹಿಜಾಬ್ ಕುರಿತಂತೆ ಕರ್ನಾಟಕ ಉಚ್ಚ ನ್ಯಾಯಾಲಯವು ಮಾರ್ಚ್ 15ರಂದು ತೀರ್ಪು ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

RELATED NEWS

  1. ಮಾ.15ರಂದು ಶಾಲಾ, ಕಾಲೇಜಿಗೆ ರಜೆ, ಏನೇನು ನಿರ್ಬಂಧ ಇರಲಿವೆ, ಆದೇಶದಲ್ಲಿ ಏನಿದೆ?
  2. ಶಿವಮೊಗ್ಗ ಜಿಲ್ಲೆಯಾದ್ಯಂತ 144 ನಿಷೇಧಾಜ್ಞೆ ಜಾರಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿ ಮನವಿ
  3. ನಿಷೇಧಾಜ್ಞೆ ಹಿನ್ನೆಲೆ ಮಾ.14ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

ಜಿಲ್ಲೆಯು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಮುನ್ನೆಚ್ಚರಿಕೆ ಉದ್ದೇಶದಿಂದ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಕರ್ತವ್ಯಕ್ಕೆ 8 ಕೆ.ಎಸ್.ಆರ್.ಪಿ. ತುಕಡಿಗಳು, 8 ಡಿಎಆರ್ ತುಕಡಿಗಳು, 1 ಆರ್.ಎ.ಎಫ್. ತುಕಡಿ ಮತ್ತು ಶಿವಮೊಗ್ಗ ಜಿಲ್ಲೆಯ ಪೆÇಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

error: Content is protected !!