ಜನ್ಮದಿನ ಹಿನ್ನೆಲೆ ಎಲ್ಲೆಡೆ ಪುನೀತ್ ರಾಜಕುಮಾರ್ ಫ್ಲೆಕ್ಸ್, ‘ಸಿನಿ ಜರ್ನಿ’ ನೆನಪು

 

 

ಸುದ್ದಿ ಕಣಜ.ಕಾಂ | DISTRICT | CINEMA NEWS
ಶಿವಮೊಗ್ಗ: ನಗರದ ಎಲ್ಲ ರಸ್ತೆಗಳು ಪುನೀತ್ ರಾಜಕುಮಾರ್ ಅವರ ಫ್ಲೆಕ್ಸ್ ಗಳಿಂದ ರಾರಾಜಿಸುತ್ತಿದೆ. ರಸ್ತೆ ವಿಭಜಕಗಳಿಗೆ ಫ್ಲೆಕ್ಸ್ ಗಳನ್ನು ಹಾಕಲಾಗಿದ್ದು, ಪುನೀತ್ ಅವರ ‘ಸಿನಿ ಜರ್ನಿ’ಯ ಎಲ್ಲ ನೆನಪುಗಳನ್ನು ಈ ಫ್ಲೆಕ್ಸ್ ಗಳು ನೆನಪಿಸುತ್ತಿವೆ.
‘ರಾಜಕುಮಾರ’ನಂತೆ ಬಾಳಿ ಎಲ್ಲರ ಪ್ರೀತಿಯ ‘ಅಪ್ಪು’ವಾಗಿ ಅಭಿಮಾನಿಗಳಲ್ಲಿ ಚಿರಸ್ಥಾಯಿಯಾಗಿರುವ `ನಟಸಾರ್ವಭೌಮ’ನ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ.
ಮಾರ್ಚ್ 17ರಂದು ಪುನೀತ್ ಅವರ ಜನ್ಮದಿನವಿದ್ದು, ಅದೇ ದಿನ ‘ಜೇಮ್ಸ್’ ಚಿತ್ರ ಕೂಡ ಬಿಡುಗಡೆಯಾಗುತ್ತಿರುವುದರಿಂದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

Puneeth Rajkumar James
ಶಿವಮೊಗ್ಗದ ಎಚ್.ಪಿ.ಸಿ. ಚಿತ್ರಮಂದಿರದ ಮುಂದೆ ಪುನೀತ್ ರಾಜಕುಮಾರ್ ಕಟೌಟ್

READ | ಅಳುತ್ತ ತಾಯಿಯಿಂದ ದೂರವಾದ 2 ವರ್ಷದ ಆನೆ ಮರಿ, ತಾಯಿಯಿಂದ ಬೇರ್ಪಟ್ಟ ಮರಿಯಾನೆಯ ಆರೈಕೆ ಹೇಗೆ ನಡೆಯುತ್ತದೆ?

ಗಮನ ಸೆಳೆಯುತ್ತಿರುವ ಪುನೀತ್ ಕಟೌಟ್
ನಗರದ ಎಚ್.ಪಿ.ಸಿ ಚಿತ್ರಮಂದಿರದಲ್ಲಿ ಪುನೀತ್ ರಾಜಕುಮಾರ ಅವರ 30 ಅಡಿಯ ಕಟೌಟ್ ನಿಲ್ಲಿಸಲಾಗಿದೆ. ಅಭಿಮಾನಿಗಳು
ಇಡೀ ಚಿತ್ರ ಮಂದಿರದ ಮಾತ್ರವಲ್ಲದೇ ನೆಹರೂ ರಸ್ತೆ, ಬಾಲ್ ರಾಜ್ ಅರಸ್ ರಸ್ತೆಯಲ್ಲಿ ಫ್ಲೆಕ್ಸ್ ಗಳನ್ನು ಹಾಕಿದ್ದಾರೆ.
ಪ್ರತಿ ಫ್ಲೆಕ್ಸ್ ಕೆಳಗಡೆ ಪುನೀತ್ ಅಭಿನಯದ ಚಿತ್ರಗಳ ಹೆಸರುಗಳನ್ನು ಬರೆಯಲಾಗಿದೆ. ಈ ಫ್ಲೆಕ್ಸ್ ಗಳ ಮೂಲಕ ಪುನೀತ್ ಅವರ ಸಿನಿಯಾನವನ್ನೇ ಬಿಚ್ಚಿಡಲಾಗಿದೆ.

https://www.suddikanaja.com/2021/05/26/kannada-young-talent-shine-in-kollywood/

error: Content is protected !!