ಸತತ ಮೂರನೇ ದಿನ ಬಂಗಾರ, ಬೆಳ್ಳಿಯ ಬೆಲೆ ಇಳಿಕೆ, ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್

 

 

ಸುದ್ದಿ ಕಣಜ.ಕಾಂ | KARNATAKA | MARKET TREND
ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಆಭರಣ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ. ಕಳೆದ ಮೂರು ದಿನಗಳಿಂದ ನಿರಂತರ ಬಂಗಾರದ ಬೆಲೆಯು ಇಳಿಕೆಯಾಗುತ್ತಿದ್ದು, ಮೂರು ದಿನದಲ್ಲಿ 1,210 ರೂ. ಇಳಿಕೆಯಾಗಿದೆ.
ರಷ್ಯಾ, ಉಕ್ರೇನ್ ಯುದ್ಧ ಬೆನ್ನಲ್ಲೇ ಭಾರತದಲ್ಲಿ ಚಿನ್ನ, ಬೆಳ್ಳಿಯ ಬೆಲೆ ಏರುಗತಿಯಲ್ಲಿ ಸಾಗಿತ್ತು. ಇದು ಆಭರಣ ಪ್ರಿಯರು ಮತ್ತು ಮದುವೆ ಸಮಾರಂಭಗಳಿಗೆ ಅಡ್ಡಿ ಉಂಟು ಮಾಡಿತ್ತು. ಆದರೀಗ, ಬೆಲೆ ಇಳಿಕೆ ಖುಷಿ ಮೂಡುವಂತೆ ಮಾಡಿದೆ.

READ | ಚಿನ್ನ, ಬೆಳ್ಳಿಯ ಬೆಲೆಯಲ್ಲಿ ಭಾರಿ ಇಳಿಕೆ

10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆಯು ಮಂಗಳವಾರದಂದು 47,300 ರೂಪಾಯಿ ಹಾಗೂ 24 ಕ್ಯಾರೆಟ್ ಗೆ 51,600 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ ಚಿನ್ನದ ದರವು ಸೋಮವಾರಕ್ಕೆ ಹೋಲಿಸಿದರೆ ಇಂದು 330 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಪ್ರತಿ ಕೆಜಿಗೆ 500 ರೂ. ಇಳಿಕೆಯಾಗಿದ್ದು, 72,300 ರೂ. ನಿಗದಿಯಾಗಿದೆ. ಮಾರ್ಚ್ 14ರಿಂದ 16ರ ವರೆಗೆ ಬೆಳ್ಳಿಯ ಬೆಲೆಯು 2,400 ರೂ. ಇಳಿಕೆಯಾಗಿದೆ. ಕಳೆದ 13 ದಿನಗಳ ರೇಟ್ ಕಾರ್ಡ್ ಕೆಳಗಿನಂತಿದೆ.

ಬೆಂಗಳೂರಲ್ಲಿ ಚಿನ್ನ, ಬೆಳ್ಳಿಯ ಬೆಲೆ 
ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ(ಕೆಜಿ)
ಮಾರ್ಚ್ 4 47,700 52,040 72,500
ಮಾರ್ಚ್ 5 48,400 52,800 73,400
ಮಾರ್ಚ್ 6 48,400 52,800 73,400
ಮಾರ್ಚ್ 7 49,400 53,890 75,700
ಮಾರ್ಚ್ 8 49,400 53,890 74,600
ಮಾರ್ಚ್ 9 50,700 55,310 75,700
ಮಾರ್ಚ್ 10 48,200 52,580 74,100
ಮಾರ್ಚ್ 11 48,200 52,580 74,600
ಮಾರ್ಚ್ 12 48,400 52,800 74,700
ಮಾರ್ಚ್ 13 48,410 52,810 74,700
ಮಾರ್ಚ್ 14 48,100 52,470 74,700
ಮಾರ್ಚ್ 15 47,600 51,930 72,800
ಮಾರ್ಚ್ 16 47,300 51,600 72,300

https://www.suddikanaja.com/2022/03/10/gold-and-silver-price-decline/

error: Content is protected !!