ಅಕ್ರಮವಾಗಿ ಹಸುಗಳನ್ನು ತಂದಿಟ್ಟುಕೊಂಡಿದ್ದ ಇಬ್ಬರು ಅರೆಸ್ಟ್

 

 

ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ತಂದು ಇಟ್ಟುಕೊಂಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಆಲೇಮಾನ್ ಕೇರಿ ನಿವಾಸಿ ಹಾಜಿ ರಫೀಕ್ ಅಹಮ್ಮದ್ (71), ಅಣ್ಣಾನಗರದ ನಿವಾಸಿ ವಸೀಂ ಖಾನ್(29) ಬಂಧಿತರು. ಇವರ ಬಳಿಯಿಂದ ಒಟ್ಟು 39 ಜಾನುವಾರುಗಳನ್ನು ವಶಪಡಿಸಿಕೊಂಡು ಆರೋಪಿತರ ವಿರುದ್ಧ ದಿ ಕರ್ನಾಟಕ ಪ್ರಿವೆನ್ಶನ್ ಆಫ್ ಸ್ಲಾಟರ್ ಆ್ಯಂಡ್ ಪ್ರಿವಿನ್ಶನ್ ಆಫ್ ಕ್ಯಾಟಲ್ ಆ್ಯಕ್ಡ್ 2020 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

READ | ಕೋಟೆ ಪೊಲೀಸರ ಭರ್ಜರಿ ಕಾರ್ಯಾಚರಣೆ, ಕಸಾಯಿಖಾನೆ ಸೇರಲಿದ್ದ‌ 39 ಹಸು, ಎಮ್ಮೆಗಳು ಸೇಫ್

ನಡೆದಿದ್ದೇನು?
ಗುರುವಾರ ಬೆಳಗ್ಗೆ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಲೇಮಾನ್ ಕೇರಿ 1ನೇ ತಿರುವಿನಲ್ಲಿ ರಫೀಕ್ ಅಹಮ್ಮದ್ ಖಾನ್ ಮತ್ತು ವಸೀಂ ಖಾನ್ ಅವರು ಜಾನುವಾರುಗಳನ್ನು ತಂದಿಟ್ಟುಕೊಂಡ ಬಗ್ಗೆ ಬಂದ ಮಾಹಿತಿಯ ಮೇರೆಗೆ ಕೋಟೆ ಪೊಲೀಸ್ ಠಾಣೆ ಪಿಐ ಹಾಗೂ ಸಿಬ್ಬಂದಿ ತಂಡವು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದೆ. ನಂತರ, ಜಾನುವಾರುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಿದೆ.

error: Content is protected !!