ಶಿವಮೊಗ್ಗದ ಬಹುಭಾಗಗಳಲ್ಲಿ ಎರಡು ದಿನ ಕರೆಂಟ್ ಇರಲ್ಲ, ಯಾವ್ಯಾವ ಪ್ರದೇಶಗಳಲ್ಲಿ ಪವರ್ ಕಟ್?

 

 

ಸುದ್ದಿ ಕಣಜ.ಕಾಂ | CITY | POWER CUT
ಶಿವಮೊಗ್ಗ: ಮಂಡ್ಲಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ 20 ಎಂವಿಎ ಶಕ್ತಿ ಪರಿವರ್ತಕದ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾರ್ಚ್ 19ರಂದು ಬೆಳಗ್ಗೆ 9ರಿಂದ ಸಂಜೆ 6ರ ವರೆಗೆ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

READ | ಆಭರಣ ಪ್ರಿಯರಿಗೆ ಮತ್ತೆ ಶಾಕ್, ಚಿನ್ನ, ಬೆಳ್ಳಿ ತುಟ್ಟಿ

ಎಲ್ಲೆಲ್ಲಿ ಪವರ್ ಕಟ್?
ಪಿಯರ್‍ಲೈಟ್, ಪೇಪರ್ ಪ್ಯಾಕೇಜ್, ಮಂಡ್ಲಿ ಕೈಗಾರಿಕ ಪ್ರದೇಶ, ಕೆ.ಅರ್.ವಾಟರ್ ಸಪ್ಲೈ, ಗೋಪಿಶೆಟ್ಟಿಕೊಪ್ಪ, ಇಲಿಯಾಜ್ ನಗರ 1 ರಿಂದ 10ನೇ ತಿರುವು, ಚಾಲುಕ್ಯನಗರ, ಕೆ.ಎಚ್.ಬಿ. ಕಾಲೋನಿ, ಸಿದ್ದೇಶ್ವರ ಸರ್ಕಲ್, ಮೇಲಿನ ತುಂಗಾನಗರ, ಎನ್.ಟಿ.ರಸ್ತೆ, ಬಿ.ಎಚ್.ರಸ್ತೆ, ಓಟಿ ರಸ್ತೆ, ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣ, ಊರುಗಡೂರು, ಸೂಳೇಬೈಲು ಸುತ್ತಮುತ್ತ, ದುರ್ಗಿಗುಡಿ, ಜೆ.ಸಿ.ನಗರ, ಬುದ್ಧನಗರ, ಅಮೀರ್ ಅಹ್ಮದ್ ಸರ್ಕಲ್, ಆರ್.ಎಂ.ಎಲ್‍ನಗರ, ಭಾರತಿ ಕಾಲೋನಿ, ಸವಾರ್ ಲೈನ್ ರಸ್ತೆ, ಪಂಚವಟಿ ಕಾಲೋನಿ, ಮಂಜುನಾಥ ಬಡಾವಣೆ, ಖಾಜಿನಗರ, ಟಿಪ್ಪುನಗರ, ಗಾರ್ಡನ್ ಏರಿಯಾ, ನೆಹರೂ ರಸ್ತೆ, ಮಿಳಘಟ್ಟ, ಆನಂದರಾವ್ ಬಡಾವಣೆ, ಹರಕೆರೆ, ನ್ಯೂಮಂಡ್ಲಿ, ಹಳೇ ಮಂಡ್ಲಿ, ಗಂಧರ್ವ ನಗರ, ಶಂಕರ ಕಣ್ಣಿನ ಆಸ್ಪತ್ರೆ, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಗಾಂಧಿ ಬಜಾರ್, ಕುಂಬಾರಗುಂಡಿ, ಬಿ.ಬಿರಸ್ತೆ, ಕೆ.ಆರ್.ಪುರಂ, ಸೀಗೆಹಟ್ಟಿ, ಮುರಾದ್ ನಗರ, ಸವಾಯಿ ಪಾಳ್ಯ, ಕುರುಬರ ಪಾಳ್ಯ, ಇಮಾಮ್ ಬಾಡಾ, ಟಿ.ಎಸ್.ಆರ್.ರಸ್ತೆ, ರವಿವರ್ಮ ಬೀದಿ, ಮಾಕಮ್ಮನ ಕೇರಿ, ಆಜಾದ್‍ನಗರ, ಲಾಲ್ ಬಂದರ್ ಕೇರಿ, ಕಲ್ಲೂರುಮಂಡ್ಲಿ ಫೀಡರ್, ಗಾಜನೂರು ರೂರಲ್, ರಾಮಿನಕೊಪ್ಪ ಗ್ರಾಮಾಂತರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ ವಿಭಾಗದ 2ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ | ಪುನೀತ್ ಜನ್ಮದಿನ ಅದ್ಧೂರಿ ಆಚರಣೆ, ನೂರಕ್ಕೂ ಅಧಿಕ ಜನ ನೇತ್ರದಾನ, 2-3 ದಿನ ಥಿಯೇಟರ್ ಹೌಸ್ ಫುಲ್

20ರಂದು ವಿದ್ಯುತ್ ವ್ಯತ್ಯಯ
ಮಾಚೇನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ನಾಲ್ಕನೇ ತ್ರೈಮಾಸಿಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.20ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ ವಿವಿಧೆಡೆ ಕರೆಂಟ್ ಇರಲ್ಲ.
ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ ಮತ್ತು ಜಯಂತಿಗ್ರಾಮ, ಹೊನ್ನವಿಲೆ, ಮೇ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕಿಯೋನಿಕ್ಸ್ ಐ.ಟಿ.ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆ.ಎಸ್.ಆರ್.ಪಿ. ಕಾಲೋನಿ, ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

error: Content is protected !!