ಭಾರೀ ಮಳೆ ಸೃಷ್ಟಿಸಿದ ಅನಾಹುತ, ಎರಡು ಮನೆಗಳಿಗೆ ಹಾನಿ, ಧರೆಗುರುಳಿದ ಮರಗಳು

 

 

ಸುದ್ದಿ ಕಣಜ.ಕಾಂ | TALUK | RAIN FALL
ಸಾಗರ: ಅಕಾಲಿಕ ಮಳೆಯು ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಾನಿ ಉಂಟು ಮಾಡಿದೆ. ಸಾಗರದ ಸುತ್ತಮುತ್ತ ಬುಧವಾರ ಸಂಜೆಯಿಂದ ಸುರಿದ ಮಳೆರಾಯ ಮನೆ, ಮರಗಳನ್ನು ನೆಲಕ್ಕೆ ಉರುಳಿಸಿದ್ದಾನೆ. ಮಳೆಯ ಆರ್ಭಟಕ್ಕೆ ಬೃಹತ್ ಆಕಾರದ ಮರಗಳು ಬುಡ ಮೇಲಾಗಿವೆ.

READ | ಭಾರೀ ಮಳೆ, ಕುರಿ ಕಾಯುತಿದ್ದ ಮಹಿಳೆ ಸಾವು

ರೈಲ್ವೆ ನಿಲ್ದಾಣ ಸಮೀಪದ ದ್ವಾರಕನಾಥ್ ಎಂಬುವವರ ಮನೆಯ ಮೇಲೆ ಮರವೊಂದು ಬಿದ್ದಿದ್ದು ಮನೆಯ ಮುಂಙಾಗದ ಚಾವಣಿ, ಕಿಡಕಿ ಗಾಜುಗಳು ಪುಡಿಯಾಗಿವೆ.
ಮತ್ತೊಂದೆಡೆ, ಆವಿನಹಳ್ಳಿಯಲ್ಲಿ ತೆಂಗು, ಹಲಸಿನ ಮರಗಳು ಉರುಳಿ ಮನೆಗಳು ಜಖಂಗೊಂಡಿವೆ. ಮನೆಯ ಮಾಲೀಕರು ಅತಂತ್ರ ಸ್ಥಿತಿಯಲ್ಲಿದ್ದಾರೆ.
ರಸ್ತೆಗಳಲ್ಲಿ ತುಂಬಿ ಹರಿದ ನೀರು
ಗುಡುಗು ಸಹಿತ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಎಸ್.ಎನ್. ರಸ್ತೆ, ಮಾರ್ಕೆಟ್‌ ರಸ್ತೆಗಳಲ್ಲಿ ನೀರು ತುಂಬಿದೆ. ಚರಂಡಿಗಳು ತುಂಬಿ ನೀರು ಹರಿದ ಕಾರಣದಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದವು. ಕಸದ ರಾಶಿ ರಸ್ತೆ ಇಡೀ ಹರಡಿಕೊಂಡಿತ್ತು.

error: Content is protected !!