ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ KSRTC ಬಸ್ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರಿದಿದೆ. ಸೋಮವಾರ ಮಹಿಳೆಯೊಬ್ಬರ ಲ್ಯಾಪ್ ಟಾಪ್ ಕಳವು ಮಾಡಲಾಗಿದೆ.
ಬಾಗಲಕೋಟೆ ಮೂಲದ ಸೌಮ್ಯ ಅಂಟಿನಮಠ ಎಂಬುವವರೇ ಲ್ಯಾಪ್ ಟಾಪ್ ಕಳೆದುಕೊಂಡಾಕೆ. ಹುನಗುಂದದಲ್ಲಿ ಸಾರಿಗೆ ಸಂಸ್ಥೆಯ ಬಸ್ ಹತ್ತಿದ ಇವರು ಚಿಕ್ಕಮಗಳೂರಿಗೆ ತೆರಳಬೇಕಿತ್ತು. ಈ ನಡುವೆ ಶಿವಮೊಗ್ಗಕ್ಕೆ ಬಂದಾಗ ಶೌಚಾಲಯಕ್ಕಾಗಿ ಹೋಗಿದ್ದಾರೆ. ಆಗ ಲ್ಯಾಪ್ ಟ್ಯಾಪ್ ಬ್ಯಾಗ್ ಕಳ್ಳತನಮಾಡಲಾಗಿದೆ.
ಬ್ಯಾಗ್ ನಲ್ಲಿ ಏನೇನಿತ್ತು?
ಬ್ಯಾಗಿನಲ್ಲಿ ₹11,000 ನಗದು, ಎಟಿಎಂ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಓಟರ್ ಐಡಿಗಳು ಇದ್ದವು. ಶೌಚಾಲಯಕ್ಕೆ ಹೋಗುವಾಗ ನಿರ್ವಾಹಕರಿಗೆ ಹೇಳಿ ತೆರಳಿದ್ದರು. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.