ಸರ್ಕ್ಯೂಟ್ ಹೌಸ್ ಬಳಿ‌ ಕೂದಲೆಳೆಯಲ್ಲಿ ತಪ್ಪಿದ ಅನಾಹುತ

 

 

ಸುದ್ದಿ ಕಣಜ.ಕಾಂ‌ | CITY | CRIME NEWS
ಶಿವಮೊಗ್ಗ: ನಗರದ ಸರ್ಕ್ಯೂಟ್ ಹೌಸ್ ಬಳಿ‌ ಸ್ಪೀಡ್ ಚೆಕ್‌ ಕ್ಯಾಮೆರಾ‌ ಕಂಬಕ್ಕೆ ಲಾರಿಯೊಂದು ಡಿಕ್ಕಿ‌ ಹೊಡೆದಿದ್ದು, ಕಂಬ‌ ಧರೆಗೆ ಉರುಳಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಸ್ಕೂಟರ್ ಚಾಲಕ ಪಾರು
ಸಾಗರದಿಂದ ಅತೀ ವೇಗದಿಂದ ಬರುತ್ತಿದ್ದ ಲಾರಿಯು ಕಂಬಕ್ಕೆ ಡಿಕ್ಕಿ‌ ಹೊಡೆದಿದೆ. ಕಂಬವು ಪಕ್ಕದಲ್ಲೇ ಹೋಗುತಿದ್ದ ಸ್ಕೂಟರಿಗೆ ಅಂಚು ತಾಕಿದೆ. ತಕ್ಷಣ ಸ್ಕೂಟರ್ ನಿಂದ‌ ಜಿಗಿದ ಚಾಲಕ‌ ಪಾರಾಗಿದ್ದಾನೆ. ಒಂದುವೇಳೆ‌, ಕಂಬ ಚಾಲಕನ ಮೇಲೆ‌ ಬಿದ್ದಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.

READ | ಹೊಟ್ಟೆಗೆ ತಿವಿದ‌ ಕಾಡುಕೋಣ, ರೈತನಿಗೆ ಗಂಭೀರ ಗಾಯ, ಇದನ್ನು ಕಂಡು ಪ್ರಜ್ಞೆ ತಪ್ಪಿದ ಪತ್ನಿ

ಓಡಿ ಹೋಗುತಿದ್ದ ಲಾರಿಯನ್ನು‌ ಹಿಡಿದ ಪೊಲೀಸ್
ಕಂಬಕ್ಕೆ ಡಿಕ್ಕಿ‌‌ ಹೊಡೆದು ಚಾಲಕ‌ ಲಾರಿ ಸಮೇತ ಅಲ್ಲಿಂದ ಓಡಿಹೋಗಿದ್ದಾನೆ. ತಕ್ಷಣ ಬಸ್ ನಿಲ್ದಾಣ ಹತ್ತಿರ‌ ಲಾರಿಯನ್ನು ಹಿಡಿಯಲಾಗಿದೆ. ಅವಘಡದಲ್ಲಿ ಕಂಬ,‌ ಕ್ಯಾಮೆರಾ ಮತ್ತು ಬ್ಯಾಟರಿ‌ ಹಾಳಾಗಿದೆ.

error: Content is protected !!