ಮಹಿಳೆಯರೇ ಚಿನ್ನ ಪಾಲಿಶಿಂಗ್ ಮಾಡಿಸುವಾಗ ಎಚ್ಚರ!

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ವಿದ್ಯಾನಗರದ ಮೂರನೇ ತಿರುವಿನಲ್ಲಿ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಪಾಲಿಶಿಂಗ್ ಮಾಡುವ ನೆಪದಲ್ಲಿ ತೆಗೆದುಕೊಂಡು ವ್ಯಕ್ತಿಯೊಬ್ಬರು ಪರಾರಿಯಾಗಿದ್ದಾರೆ.
ಅಕ್ಷತಾ ಎನ್ನುವವರು 1.80 ಲಕ್ಷ ರೂಪಾಯಿ ಮೌಲ್ಯದ 40 ಗ್ರಾಂದ ಮಾಂಗಲ್ಯವನ್ನು ಕಳೆದುಕೊಂಡಿದ್ದಾರೆ. ಪಾಲಿಶಿಂಗ್ ಮಾಡುವುದಾಗಿ ಹೇಳಿದ್ದಕ್ಕೆ ತಾಳಿ ಸರವನ್ನು ನೀಡಿದ್ದರು.

READ | ಬೆಂಗಳೂರು ಮೂಲದ ವ್ಯಕ್ತಿ ಶಿವಮೊಗ್ಗದ ಲಾಡ್ಜ್ ನಲ್ಲಿ ಆತ್ಮಹತ್ಯೆ

ನೀರು ತರಲು ಹೇಳಿ ಎಸ್ಕೇಪ್
ಅಕ್ಷತಾ ಅವರು ಮೂರನೇ ಕ್ರಾಸ್ ನಲ್ಲಿ ಅಂಗಡಿ ಹೊಂದಿದ್ದು, ಸರ ಪಾಲಿಶ್ ಮಾಡುವಾಗ ನೀರು ತರುವಂತೆ ಹೇಳಿದ್ದಕ್ಕೆ ಮಹಿಳೆಯು ಮನೆಯೊಳಗೆ ಹೋಗಿ ವಾಪಸ್ ಬರುವ ಹೊತ್ತಿಗೆ ಸರ ತೆಗೆದುಕೊಂಡು ಪರಾರಿಯಾಗಿದ್ದಾನೆ.

error: Content is protected !!