ದೇಶದಲ್ಲಿ 36,000 ಹಿಂದೂ ದೇವಸ್ಥಾನ ನಿರ್ಮಾಣವೇ ಮುಖ್ಯ ಗುರಿ

KS Eshwarappa

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ದೇಶದ ವಿವಿಧೆಡೆ ಇಸ್ಲಾಮಿಕ್ ಆಕ್ರಮಣಕಾರರು 36,000 ಹಿಂದೂ ದೇವಸ್ಥಾನಗಳನ್ನು ನೆಲಸಮ‌ ಮಾಡಿದ್ದು, ಅವುಗಳ ಪುನರ್ ನಿರ್ಮಾಣವೇ ಹಿಂದೂ ಸಮಾಜದ ಗುರಿಯಾಗಿದೆ ಎಂದು ಶಾಸಕ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮಸೀದಿಗಳನ್ನು ತೆರವುಗೊಳಿಸಿ ಅಲ್ಲಿ ಹಿಂದೂ ದೇವಾಲಯ ನಿರ್ಮಿಸಲಾಗುವುದು ಎಂದು ತಿಳಿಸಿದರು.

 

READ | ಶಿವಮೊಗ್ಗದಲ್ಲಿ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರ ಪ್ರಮುಖ ಸಭೆ, ನೀಡಿದ ಸೂಚನೆಗಳೇನು?

ಈಗ ದೇವಸ್ಥಾನದ ಪುರಾವೆಗಳು‌ ಸಿಕ್ಕಿವೆ
ಅಯೋಧ್ಯೆ, ಕಾಶಿ, ಮಥುರಾ ಸೇರಿ ದೇಶದ ವಿವಿಧೆಡೆ ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಿವೆ. ಈ ಪುಣ್ಯಕ್ಷೇತ್ರಗಳಲ್ಲಿ ಮುಸ್ಲಿಂ ಆಕ್ರಮಣಕಾರರು ದೇವಾಲಯಗಳನ್ನು ಧ್ವಂಸಗೊಳಿಸಿ ಮಸೀದಿಗಳನ್ನು ನಿರ್ಮಿಸಿದ್ದು, ಹಿಂದೂ ದೇವಾಲಯಗಳು ಇದ್ದವು ಎಂಬುದಕ್ಕೆ ಪುರಾವೆ ಸಿಗುತ್ತಿವೆ. ಇದಕ್ಕೆ ಕಾಶಿಯಲ್ಲಿ ದೊರೆತ 12 ಅಡಿ ಎತ್ತರದ ಶಿವಲಿಂಗವೇ ಸಾಕ್ಷಿಯಾಗಿದೆ ಎಂದರು.
ಕಾಶಿಯಲ್ಲಿ ಮಸೀದಿಯ ಪಕ್ಕದಲ್ಲೇ ನಂದಿ ಇದೆ. ಆ ನಂದಿ ಮಸೀದಿಯನ್ನೇ ನೋಡುತ್ತಿದೆ. ಇದರ ಅರ್ಥ ಮಸೀದಿ ಒಳಗಿರುವ ಶಿವಲಿಂಗವನ್ನು ನೋಡುತ್ತಿದೆ ಎಂದೇ ಗ್ರಹಿಸಬಹುದು. ಅಲ್ಲದೆ, ಅಲ್ಲಿ ಶೃಂಗಾರಗೌರಿ, ನಂದಿ, ಗಣೇಶ, ಆಂಜನೇಯನ ವಿಗ್ರಹಗಳೂ ಇದ್ದವು ಎನ್ನುವುದಕ್ಕೆ ಸಾಕ್ಷಿ ಇದೆ ಎಂದರು.
ಪ್ರಮುಖರಾದ ಎನ್.ಜೆ. ನಾಗರಾಜ್, ಕೆ. ಗಿರೀಶ್ ಪಟೇಲ್, ಎಸ್. ದತ್ತಾತ್ರಿ, ಶಿವರಾಜ್, ಎಸ್.ಎನ್. ಚನ್ನಬಸಪ್ಪ, ಎಸ್. ಜ್ಞಾನೇಶ್ವರ್, ವಿನ್ಸೆಂಟ್ ರೋಡ್ರಿಗಸ್, ಕೆ.ವಿ. ಅಣ್ಣಪ್ಪ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!