ಅಪಾಯ‌ ಹಿನ್ನೆಲೆ‌6 ಕುಟುಂಬದ ‌30 ಜನರಿಗೆ ಪುನರ್ವಸತಿ

IMG 20220521 WA0003

 

 

ಸುದ್ದಿ ಕಣಜ.ಕಾಂ | TALUK | FLOOD NEWS
ಹೊಳೆಹೊನ್ನೂರು: ಕಳೆದ‌ ಎರಡು‌ ದಿ‌ನ ನಿರಂತರ ಸುರಿದ ಮಳೆ ಶುಕ್ರವಾರ ಕ್ಷೀಣಿಸಿದೆ.‌‌‌‌ ಆದರೆ,‌ ಧಾರಾಕಾರವಾಗಿ‌ ಸುರಿದ‌ ಮಳೆ‌ ಹಲವು‌ ಅನಾಹುತಗಳನ್ನು ಸೃಷ್ಟಿಸಿದೆ.
ಮನೆಗಳು‌ ಹಾಳಾಗಿದ್ದು, ಕೆರೆ-ಕಟ್ಟೆ, ಚಾನಲ್ ಗಳು‌ ಭರ್ತಿಯಾಗಿ‌ ರಭಸವಾಗಿ‌ ನೀರು‌ ಹರಿದ‌ ಪರಿಣಾಮ‌ ರಸ್ತೆಗಳು‌ ಗುಂಡಿ ಬಿದ್ದಿವೆ. ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಲ್ಲಿಗೆ ನಗರದಲ್ಲಿ ಸುಮಾರು ಆರು ಮನೆಗಳಿಗೆ ಅತಿ ಹೆಚ್ಚು ಮಳೆ ನೀರು ನುಗ್ಗಿದ್ದರಿಂದ ಹಾಗೂ ಕಟ್ಟಡದ ಗೋಡೆಗಳು ಬಹುತೇಕ ತೇವದಿಂದ ಕೂಡಿದ್ದು, ಅಪಾಯದ ಸ್ಥಿತಿಯಲ್ಲಿದ್ದ ರಿಂದ 6 ಕುಟುಂಬಗಳ ಸುಮಾರು 30 ಸಂತ್ರಸ್ತರನ್ನು ಸ್ಥಳೀಯ ಬಿಸಿಎಂ ಹಾಸ್ಟೆಲ್ ಗೆ ಸ್ಥಳಾಂತರಿಸಲಾಗಿದೆ. ತಾತ್ಕಾಲಿಕವಾಗಿ ಪುನರ್ವಸತಿ ಕಾಳಜಿ ಕೇಂದ್ರ ತೆರೆಯಲಾಗಿದ್ದು, ಆರೋಗ್ಯ ತಪಾಸಣೆ ಆಹಾರ ವ್ಯವಸ್ಥೆ ಕೈಗೊಳ್ಳಲಾಗಿದೆ ..

Leave a Reply

Your email address will not be published. Required fields are marked *

error: Content is protected !!