ಅಕಾಲಿಕ ಮಳೆಯಿಂದ ಮೆಸ್ಕಾಂಗೆ ಉಂಟಾದ ನಷ್ಟವೆಷ್ಟು?

shivamogga rain 1

 

 

ಸುದ್ದಿ ಕಣಜ‌.ಕಾಂ | DISTRICT | MESCOM
ಶಿವಮೊಗ್ಗ: ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಇದರೊಂದಿಗೆ, ಮೆಸ್ಕಾಂಗೆ ಭಾರೀ ನಷ್ಟ ಉಂಟಾಗಿದೆ.
ಎರಡು ದಿನಗಳ ಕಾಲ ಧಾರಾಕಾರ ಸುರಿದ ಮಳೆಯಿಂದಾಗಿ ಮೆಸ್ಕಾಂ ಶಿವಮೊಗ್ಗ ವಿಭಾಗಕ್ಕೆ ಇದುವರೆಗೆ ಅಂದಾಜು ‌₹80-90 ಲಕ್ಷ ನಷ್ಟವಾಗಿದೆ.
ಜಿಲ್ಲೆಯಾದ್ಯಂತ 500 ವಿದ್ಯುತ್ ಕಂಬಗಳು ಹಾಗೂ 60 ಟ್ರಾನ್ಸ್ ಫಾರ್ಮರ್ ಗಳು ನಿಷ್ಕ್ರಿಯಗೊಂಡಿವೆ. ತೀರ್ಥಹಳ್ಳಿ, ಶಿವಮೊಗ್ಗ ತಾಲೂಕಿನಲ್ಲಿ 225-250 ಕಂಬಗಳು ಧರೆಗುರುಳಿವೆ. ಐದು ಟಿಸಿಗಳು‌ ನಿಷ್ಕ್ರಿಯಗೊಂಡಿವೆ. ಇನ್ನೂ ಕಾಡಂಚಿನ ಪ್ರದೇಶಗಳಲ್ಲಿ‌ ಆಗಿರುವ ನಷ್ಟದ ಬಗ್ಗೆ ಸರಿಯಾದ ಮಾಹಿತಿ‌ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!